ಉ.ಕ ಸುದ್ದಿಜಾಲ ಅಥಣಿ :
ರಾಜ್ಯದಲ್ಲಿ ಇನ್ನೇನು ಕಬ್ಬು ಕಟಾವು ಹಂಗಾಮ ಪ್ರಾರಂಭ ಆಗಿದೆ ಆದ್ರೆ, ನಮಗೆ ನಿಘದಿತ ಬೆಲೆ ಘೋಷಣೆ ಮಾಡುವ ವರೆಗೂ ಕಬ್ಬು ಕಟಾವು ಮಾಡದಂತೆ ರೈತರು ಪಟ್ಟು ಹಿಡಿದಿದ್ದಾರೆ.
ಬೆಳಗಾವಿ ಸೇರಿದಂತೆ ರಾಜ್ಯದ ಪ್ರಮುಖ ಸಕ್ಕರೆ ಕಾರ್ಖಾನೆಗಳಿಗೆ ಅಕ್ಟೊಬರ್ 20 ರಿಂದ ಕಾರ್ಖಾನೆ ಪ್ರಾರಂಭಕ್ಕೆ ಸರ್ಕಾರ ಅಸ್ತು ಅಂದಿದೆ.ಆದ್ರೆ ಬೆಲೆ ನಿಘದಿಯಾಗಿಲ್ಲ ಸಕ್ಕರೆ ಕಾರ್ಖಾನೆ ಮಾಲೀಕರು.
ಕಬ್ಬಿನ ಬೆಲೆ ಘೋಷಣೆ ಮಾಡಿ ಆಮೇಲೆ ಕಬ್ಬು ಸಾಗಾಟ ಮಾಡುವಂತೆ ರೈತ ಮುಖಂಡರು ಆಯಾ ಕಾರ್ಖಾನೆ ಹಾಗೂ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಇಂದು ಮಹಾರಾಷ್ಟ್ರಕ್ಕೆ ಸಾಗಾಟವಾಗುತ್ತಿರುವ ಕಬ್ಬಿನ ಟ್ರೈಕ್ಟರ್ ಗಳನ್ನ ದರೂರು ಕೃಷ್ಣ ಬ್ರಿಜ್ ಮೇಲೆ ತಡೆದು ರೈತ ಮುಖಂಡರು ಕಬ್ಬು ಸಾಗಾಟ ಮಾಡದಂತೆ ಆಕ್ರೋಶ ಹೊರಹಕಿದ್ದಾರೆ.
ಕಡ್ಡಾಯವಾಗಿ ಬಿಲ್ ಘೋಷಣೆ ಬಳಿಕ ಕಾರ್ಖಾನೆ ಪ್ರಾರಂಭಿಸಬೇಕು ಪ್ರತಿ ಟನ್ ಗೆ 3500 ರೂ ಬಿಲ್ ನೀಡುವಂತೆ ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಸಮಸ್ಯೆ ತಿಳಿಗೊಳಿಸಿದ್ದಾರೆ.
ವಿಡಿಯೋ – ಕಬ್ಬು ಸಾಗಾಟಕ್ಕೆ ತಡೆ, ನಿಗಧಿತ ಬೆಲೆ ಘೋಷಣೆ ಆಗುವವರೆಗೂ ಕಾರ್ಖಾನೆ ಬಂದ ರೈತರ ಪಟ್ಟು

