ಶೋಕ ವಾರ್ತೆ ರಾಯಬಾಗ :
ಚಿಕ್ಕೋಡಿ ಜಿಲ್ಲಾ ನ್ಯೂಸ್18 ವರದಿಗಾರ ಲೋಹಿತ್ ಶಿರೋಳ ಅವರಿಗೆ ಮಾತೃ ವಿಯೋಗ ಸಂಭವಿಸಿದೆ. ಕುಡುಚಿ ಪಟ್ಟಣದ ನಿವಾಸಿ ಸಾವಕ್ಕಾ ಶಿರೋಳ (70) ಅವರು ಅಕಾಲಿಕವಾಗಿ ನಿಧನರಾಗಿದ್ದಾರೆ.
ಮೃತರ ಅಂತ್ಯಕ್ರಿಯೆಯನ್ನು ಇಂದು ಮಧ್ಯಾಹ್ನ 1 ಗಂಟೆಗೆ ಅವರ ಸ್ವಗ್ರಾಮದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಮಾತೃ ವಿಯೋಗದ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಲೋಹಿತ್ ಶಿರೋಳ ಹಾಗೂ ಕುಟುಂಬ ಸದಸ್ಯರಿಗೆ ನೀಡಲಿ ಎಂದು ಉತ್ತರ ಕರ್ನಾಟಕ ಸುದ್ದಿಜಾಲದ ವೀಕ್ಷಕರಿಂದ ಪ್ರಾರ್ಥಿಸುತ್ತೇವೆ.
ಚಿಕ್ಕೋಡಿ ಜಿಲ್ಲಾ ನ್ಯೂಸ್18 ವರದಿಗಾರ ಲೋಹಿತ್ ಶಿರೋಳ ಅವರಿಗೆ ಮಾತೃ ವಿಯೋಗ
