ಉ.ಕ ಸುದ್ದಿಜಾಲ ಬಾಗಲಕೋಟೆ :
ಮಹೇಶ್ವರಾನಂದ ಸ್ವಾಮೀಜಿಯನ್ನು ಪೂರ್ಣ ನ*ಗ್ನ ಮಾಡಿ, ಆತ ಹಿಂದೂನೋ, ಸಾಬ್ ಅದಾನೋ ಎಂದು ತಪಾಸಣೆಗೆ ಒಳಪಡಿಸ ಬೇಕು. ಆತ ಮಾತನಾಡುವುದನ್ನು ನೋಡಿದರೆ ಮುಸ್ಲಿಂ ಮತಾಂಧ ಎಂದು ಗೊತ್ತಾಗುತ್ತದೆ ಎಂದು ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.
ಜಿಲ್ಲೆಯ ಜಮಖಂಡಿಯಲ್ಲಿ ಹಮ್ಮಿ ಕೊಂಡಿದ್ದ ಸರ್ವಧರ್ಮ ಸಮಾವೇಶದಲ್ಲಿ ಅಲ್ಲಮಪ್ರಭು ಅಹಿಂದ ಗುರುಪೀಠದ ಪೀಠಾಧ್ಯಕ್ಷ ಮಹೇಶ್ವರಾ ನಂದ ಸ್ವಾಮೀಜಿ ಮಾತನಾಡುತ್ತಾ, ಬೆಂಗಳೂರಿನ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡಿ ಹಾಗೂ ಮುಂದಿನ ಬಾರಿ ಯತ್ನಾಳ ಅವರನ್ನು ಸೋಲಿಸುವುದಾಗಿ ಶಪಥ ಮಾಡಿ ದ್ದಕ್ಕೆ ಶಾಸಕ ಯತ್ನಾಳ್ ಅವರು ಜಮಖಂಡಿ ಯಲ್ಲೇ ಶ್ರೀಗಳಿಗೆ ತಿರುಗೇಟು ನೀಡಿದ್ದಾರೆ.
ಇಂತಹ ಕಳ್ಳ ಸ್ವಾಮಿಗಳಿಗೆ ಸನಾತನ ಧರ್ಮದ ಬಗ್ಗೆ ಮಾತಾಡುವ ನೈತಿಕತೆ ಇಲ್ಲ. ಆ ಸ್ವಾಮಿ ಮಹೇಶ್ವರಾನಂದ ಅಂತ ಹೆಸರಿಟೊಳ್ಳಬಾರದು. ಮೈಬೂಬ್ ಸಾಬ್, ಗಜಬು ಸಾಬ್, ಚಂಡವಾಲೆ ಎಂದು ಇಟ್ಟುಕೊಳ್ಳಬೇಕು. ಇಸ್ಲಾಂ ಹಾಗೂ ಲಿಂಗಾಯತ ಒಂದು ಎನ್ನುವವರು ಎಲ್ಲರೂ ಸಾಬರೇ, ಲಿಂಗಾಯ ತರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನನ್ನ ಸೋಲಿಸಲು ಬಹಳ ಜನ ಬಂದಿದ್ದರು. ಬಾಗಲಕೋಟೆ ಜಿಲ್ಲೆಯವರು ಒಬ್ಬರು ಬಂದಿದ್ದರು. ಅಂತಹ ಲಪುಟ ನಾಯಕರ ಜತೆ ವಿಜಯೇಂದ್ರನ ಹಿಂದೆಯೂ ಯಾರು ಇಲ್ಲ. ನಿಮ್ಮಲ್ಲಿ ಒಬ್ಬ ಲೀಡರ್ ಅದಾನಲ್ಲ, ನನ್ನ ಸೋಲಿಸ್ತೀನಿ ಅಂತ ಬಂದು ತಾನೆ ಲಗಾ ಹೊಡೆದು ಹೋದ ಎಂದರು.
VIDIO – ಸ್ವಾಮೀಜಿಯನ್ನು ನಗ್ನ ಮಾಡಿ ತಪಾಸಣೆ ಮಾಡಬೇಕು – ಮಹೇಶ್ವರಾನಂದ ಶ್ರೀ ವಿರುದ್ಧ ಯತ್ನಾಳ ವಾಗ್ದಾಳಿ
