ಉ.ಕ ಸುದ್ದಿಜಾಲ ಅಥಣಿ :
ಕೃಷ್ಣಾ ನದಿಗೆ ಇರುವ ಹಿಪ್ಪರಗಿ ಬ್ಯಾರೆಜ್ 22 ರ ಗೇಟ್ ತುಂಡಾಗಿ ಅಪಾರ ಪ್ರಮಾಣದ ನೀರು ಹರಿದು ಹೋಗುತ್ತಿತ್ತು. ಸಧ್ಯ ಅಧಿಕಾರಿಗಳು ಗೇಟ್ ದುರಸ್ತಿ ಕಾರ್ಯ ಮುಗಿಸಿದ್ದು ಜನರಲ್ಲಿ ನಿರಾಳ ತರಿಸಿದೆ.
ಕಳೆದ ಮೂರು ಎರಡು ದಿನಗಳ ಹಿಂದೆ ಹಿಪ್ಪರಗಿ ಬ್ಯಾರೆಜ್ 22 ನೇ ಗೇಟ್ ತುಂಡಾಗಿತ್ತು. ಅಧಿಕಾರಿಗಳು ಹರಸಾಹಸ ಪಟ್ಟರೂ ದುರಸ್ತಿ ಸಾಧ್ಯವಾಗಿರಲಿಲ್ಲ. ನಿರಂತರ ಪ್ರಯತ್ನದ ಫಲವಾಗಿ ಸಧ್ಯ ಗೇಟ್ ಬಾಗಿಲು ದುರಸ್ತಿ ಮಾಡುವಲ್ಲಿ ಸಫಲರಾಗಿದ್ದಾರೆ.
ಇನ್ನೂ ಕೃಷ್ಣಾ ನದಿಯಿಂದ ಹಿಪ್ಪರಗಿ ಆಣೆಕಟ್ಟು ಮೂಲಕ ಈಗಾಗಲೇ ಅಪಾರ ಪ್ರಮಾಣದ ನೀರು ಹರಿದು ಹೋಗಿದೆ. 6 ಟಿಎಂಸಿ ಸಾಮಥ್ಯದ ಹಿಪ್ಪರಗಿ ಡ್ಯಾಂ ಬೇಸಿಗೆ ಸಂದರ್ಭದಲ್ಲಿ ನೀರಿನ ಅಭಾವ ಉಂಟಾಗುತ್ತದೆ ಎಂಬ ಹೆದರಿಕೆಯಲ್ಲಿ ಜನ ಇದ್ದರು.
ಹಿಪ್ಪರಗಿ ಡ್ಯಾಂ ಗೇಟ್ ದುರಸ್ತಿ ನಿರಾಳರಾದ ಕೃಷ್ಣಾ ನದಿ ತೀರದ ಜನ


