ಉ.ಕ ಸುದ್ದಿಜಾಲ ಹುಕ್ಕೇರಿ :

ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ‌ ನೀಡಿರುವದು ನನಗೆ ತೃಪ್ತಿ ತಂದಿದೆ. ವಿಜಯಪೂರಕ್ಕೆ ಹೋಗಿ ಕೊಟ್ಟಿರುವ ಉಸ್ತುವಾರಿ ಸಚಿವ ನಿಭಾಯಿಸುತ್ತೇನೆ ಎಂದು ಅರಣ್ಯ ಹಾಗೂ ಆಹಾರ ಇಲಾಖೆ ಸಚಿವ ಉಮೇಶ ಕತ್ತಿ ಹೇಳಿದರು.

ಹುಕ್ಕೇರಿ ತಾಲೂಕಿನ ಹುಲ್ಲೋಳಿ ಪಟ್ಟಣದಲ್ಲಿ ಪ್ರತಿಕ್ರಿಯಿಸಿದ ಅವರು, ಪಾಕಿಸ್ತಾನ ಹಾಗೂ ಬಾಂಗ್ಲಾದೇಶದಲ್ಲಿ ನನಗೆ ಉಸ್ತುವಾರಿ ಸಚಿವ ಕೊಡಲು ಆಗುವುದಿಲ್ಲ ರಾಜ್ಯದಲ್ಲೇ‌ ಕೊಟ್ಟಿದ್ದಾರೆ ಹೀಗಾಗಿ ವಿಜಯಪುರ ಸಂತೋಷದಿಂದ ಉಸ್ತುವಾರಿ ಸಚಿವನಾಗಿ‌ ಕಾರ್ಯ ನಿರ್ವಹಿಸುತ್ತೇನೆ ಎಂದರು.

ಸಂಪುಟ ಪುನರಚನೆ ಮಾಧ್ಯಮಗಳ ಸೃಷ್ಟಿ, ಪಂಚರಾಜ್ಯ ಚುನಾವಣೆ ಮುಗಿದ ಮೇಲೆ ವಿಸ್ತರಣೆ ಬಗ್ಗೆ ಹೈ ಕಮಾಂಡ್ ತೀರ್ಮಾನ ಮಾಡುತ್ತೇ ಹಿರಿಯ ಸಚಿವರಿಗೆ ಕೊಕ್ ಕೊಡುವದರ ಬಗ್ಗೆ ಹೈ ಕಮಾಂಡ ತೀರ್ಮಾನ‌ ಮಾಡುತ್ತದೆ. ಹೈ ಕಮಾಂಡ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ
ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು ಎಂದು ಹೇಳಿದರು.

ಜಾರಕಿಹೊಳಿ ಸಹೋದರರ ಬಿಟ್ಟು ಸಭೆ ವಿಚಾರ, ಅವರು ಯಾಕೆ ಬಂದಿಲ್ಲ ನನಗೆ ಗೊತ್ತಿಲ್ಲ ಅವರನ್ನೇ ಕೇಳಿ,‌ ಗೋವಾ ಚುನಾವಣೆಯಲ್ಲಿ ಭಾಗವಹಿಸುವಂತೆ ಪಕ್ಷ ಸೂಚಿಸಿದರೇ ಭಾಗವಹಿಸುತ್ತೇನೆ ಎಂದು ಹೇಳಿದರು.