ಉ.ಕ ಸುದ್ದಿಜಾಲ ಕಾಗವಾಡ :
ಭಾರತಾಂಬೆಯ ಬೆನ್ನಿಗೆ ನಿಂತು ಸುಮಾರು 19 ವರ್ಷಗಳ ಸೇವೆ ನೀಡಿದ ತಂದೆ ನಿವೃತ್ತಿ , ಈಗ ದೇಶಕಾಯಲು ಗಡಿಗೆ ಹೊರಟ ಮಗ
ಗ್ರಾಮೀಣ ಪ್ರದೇಶದ ಯುವಕರು ಭಾರತೀಯ ಸೇನೆಗೆ ಆಯ್ಕೆಯಾಗುವುದು ದೇಶಕ್ಕೆ ಮತ್ತು ಅವರ ಊರಿಗೆ ಹೆಮ್ಮೆಯ ವಿಷಯ. ಇದು ಅವರ ಶಿಸ್ತು, ದೈಹಿಕ ಸಾಮರ್ಥ್ಯ ಮತ್ತು ದೇಶಭಕ್ತಿಗೆ ಸಿಕ್ಕ ದೊಡ್ಡ ಮನ್ನಣೆಯಾಗಿದೆ. ಕರ್ನಾಟಕದ ಅನೇಕ ಹಳ್ಳಿಗಳಲ್ಲಿ (ಉದಾಹರಣೆಗೆ ಬೆಳಗಾವಿ ಜಿಲ್ಲೆಯ ಸಂಬರಗಿ ಮುಂತಾದ ಗ್ರಾಮಗಳು) ಪ್ರತಿಯೊಂದು ಮನೆಯಿಂದಲೂ ಯುವಕರು ಸೇನೆಗೆ ಸೇರಿ ದೇಶ ಕಾಯುತ್ತಿದ್ದಾರೆ.
ಸಂಬರಗಿ ಗ್ರಾಮದ ಮಾಜಿ ಯೋಧ ತುಕಾರಾಮ ಜಿನ್ನು ಪಾಸಲೆ 34 ಮರಾಠಾ ಫೀಲ್ಡ್ ರೆಜಿಮೆಂಟ್ ನಲ್ಲಿ ಸುಮಾರು 19 ವರ್ಷಗಳ ಕಾಲ ದೇಶ ಸೇವೆ ಸಲ್ಲಿಸಿದ್ದು, ಇತ್ತಿಚ್ಚೆಗೆ ನಿವೃತ್ತಿ ಹೊಂದಿರುವ ಅವರು ಇದೀಗ ತನ್ನ ಮಗನನ್ನೂ ಕೂಡ ದೇಶ ಸೇವೆಗೆ ಸಮರ್ಪಿಸಿದ್ದಾರೆ.
ಕಡುಬಡತನ ಕುಟುಂದಿಂದ ಬಂದಿರುವ ನಾವು, ಕಷ್ಟದ ದಿನಗಳು ನೆನಪಿಗೆ ಬರುತ್ತವೆ. ಆದ್ದರಿಂದ ನಾನು ನನ್ನ ಮಗನನ್ನು ಭಾರತೀಯ ಸೇನೆಗೆ ಸೇರಿಸಬೆಕೆಂಬ ಹಂಬಲ, ಆಶೆಯಾಗಿತ್ತು. ಇಂದು ಆ ಕನಸು ನನಸಾಗಿದ್ದು, ಭಾರತೀಯ ಸೇನೆಗೆ ನಾನು ನನ್ನ ಮಗನನ್ನು ಹೆಮ್ಮೆಯಿಂದ ದೇಶ ಸೇವೆಗೆ ಕಳುಹಿಸುತ್ತಿದ್ದೇನೆ ಎಂದು ಸೇನೆ ಸೇರಿದ ಯುವಕನ ತಂದೆ ತುಕಾರಾಮ್ ಅನಿಸಿಕೆ ಹಂಚಿಕೊಂಡರು.
ತಂದೆಯಂತೆ ಭಾರತಿಯ ಸೇನೆಗೆ ಸಂಬರಗಿಯ ಕರನ್ ಪಾಸಲೆ ಆಯ್ಕೆ
