ಉ.ಕ ಸುದ್ದಿಜಾಲ ಹುಬ್ಬಳ್ಳಿ :
ಮಧು ಬಂಗಾರಪ್ಪ ಅಂತ ಶಿಕ್ಷಣ ಮಂತ್ರಿ ನಮ್ಮ ದೇಶಕ್ಕೆ ಬೇಡವೇ ಬೇಡಾ, ಹುಬ್ಬಳ್ಳಿಯಲ್ಲಿ ವರೂರ ಗುಣದರನಂದಿ ಜೈನ ಮುನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಧು ಬಂಗಾರಪ್ಪರಿಗೆ ಪತ್ರ ಬರೆದರೆ ಸೌಜನ್ಯಕ್ಕೂ ಪ್ರತಿಕ್ರಿಯೆ ನೀಡಿಲ್ಲ, ನಮಗೆ ತುಂಬಾ ನೋವಾಗ್ತಾ ಇದೆ. ಮುಖ್ಯಮಂತ್ರಿಗಳು ನನ್ನ ಮಾತಿಗೆ ಗೌರವ ಕೊಟ್ಟಿದ್ದಾರೆ ಇವರು ರಾಜೀನಾಮೆ ಕೊಡಬೇಕು. ಸನ್ಯಾಸಿಗಳಿಗೆ ಗೌರವ ಕೊಡದ ಮಂತ್ರಿ ಯಾಕೆ ಬೇಕು. ಕಳೆದ ಮೂರು ವರ್ಷಗಳಿಂದ ಮನವಿ ಮಾಡ್ತಾ ಇದ್ದೇನೆ
ಪ್ರಿಯಾಂಕ್ ಖರ್ಗೆ ಬಹಳ ಬುದ್ದಿವಂತರಿದ್ದಾರೆ ಅವರು ನಮ್ಮ ಸನ್ಯಾಸಿಗಳಿಗೆ ಭದ್ರತೆ ನೀಡಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಜೈನ ಮುನಿ ಗುಣಧರನಂದಿ ಮಹರಾಜ
ನಿಗಮ ಮಂಡಳಿ ಸೇರಿ 5 ಬೇಡಿಕೆ ಬೇಕು ಸನ್ಯಾಸಿಗಳಿಗೆ ಸುರಕ್ಷತೆ ಕೊಡಬೇಕು ಮಹಾತ್ಮಾ ಗಾಂಧೀಯಂತೆ ಅಹಿಂಸಾ ಮಾರ್ಗದಲ್ಲಿ ಹೋಗ್ತಾ ಇದ್ದೇವೆ, ಕಾಲು ಕೈ ಮುಗಿಯುವ ಸಮಯ ಮುಗಿದಿದೆ, ಈಗ ನಾವೇ ಮುಗಿಸುವ ಕೆಲಸ ಬಂದಿದೆ ನಮಗೆ ಲಿಖಿತವಾಗಿ ಭರವಸೆ ಕೊಡಬೇಕು ಇಲ್ಲೇ ಬಂಧನ ಮಾಡಿದ್ರೆ ಇಲ್ಲೇ ದೇಹ ತ್ಯಾಗ ಮಾಡ್ತೇನೆ. ಬಿಜೆಪಿಯ ಹಲವು ನಾಯಕರು ಭೇಟಿಯಾಗಿ ಬೆಂಬಲ ನೀಡಿದ್ದಾರೆ.
ನಾನು ಸರ್ಕಾರ ಹಾಗೂ ಮಂತ್ರಿಗಳಿಗೆ ಮನವಿ ಮಾಡ್ತಾನೆ ಇದ್ದೇನೆ, ಕರ್ನಾಟಕದ ಜನ ಸಾಕಷ್ಟು ಬಡ ಜೈನ ಸಮಾಜಗಳಿವೆ. ತಮ್ಮ ಉದ್ಯೋಗ, ಕೂಲಿ ಮಾಡ್ತಾ ಜೀವನ ನಡೆಸುತ್ತಿದ್ದಾರೆ. ಮಕ್ಕಳ ಶಿಕ್ಷಣಕ್ಕೆ ತಾಳಿ ಮಾರಿ ಕಲಿಸುವಂತದ್ದನ್ನು ನಾನು ನೋಡಿದ್ದೇನೆ ಸರ್ಕಾರದಿಂದ ಯಾವುದೇ ಸಹಾಯ ಇಲ್ಲ. ಹೀಗಾಗಿ ನಿಗಮ ಮಂಡಳಿಗೆ ನಾನು ಬೇಡಿಕೆ ಇಡ್ತಾ ಇದ್ದೇನೆ.
ಇವತ್ತಿಗೆ ನಾನು ಸರ್ಕಾರಕ್ಕೆ ಗಡವು ನೀಡಿದ್ದೇ ಸಂತೋಷ ಲಾಡ್ ಕರೆ ಮಾಡಿ ಸಿಎಂ ಗೆ ಹೇಳ್ತಿನಿ ಅಂದಿದ್ರು ಲಕ್ಷ್ಮಣ ಸವದಿ, ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳಕರ ಸಹ ಕರೆ ಮಾಡಿದ್ರು, ಎರಡು ಮೂರು ದಿನ ಅಂದಿದ್ರು ಇಷ್ಟು ದಿನ ಆದರೂ ಏನು ಆಗಿಲ್ಲ. ನಮ್ಮ ಸಮಾಜಕ್ಕೆ ನ್ಯಾಯ ಸಿಗೋದಾದರೆ ದೇಹ ತ್ಯಾಗ ಮಾಡ್ತೇನೆ.
19 ನೇ ತಾರಿಖು ನನ್ನ ಹೋರಾಟ ಆರಂಭ ಮಾಡ್ತಾ ಇದ್ದೇನೆ ಬಾಗಲಕೋಟ ತೇರದಾಳದ ಜಿನ ಸೇನ ಭಟ್ಟಾರಕ ಸ್ವಾಮೀಜಿ ಆಶ್ರಮದಿಂದ ಆರಂಭ ಮಾಡ್ತೇನೆ ಅಲ್ಲಿನ ಸುತ್ತಮುತ್ತಲಿನ ನಾಯಕರು ಸೇರುತ್ತಾರೆ 19 ನಂತರ 1 ಲಕ್ಷ ಜನ ಸೇರಿಸುತ್ತೇವೆ. 4 ನೇ ತಾರೀಕಿನಿಂದ ಪಾದಯಾತ್ರೆ ಮಾಡಿ 3 ದಿನದಲ್ಲಿ ಬೆಳಗಾವಿಗೆ ಹೋಗ್ತೇನೆ.
ಚಿಕ್ಕೋಡಿಯಿಂದ ಬೆಳಗಾವಿಗೆ ಪಾದಯಾತ್ರೆ ಹೋಗ್ತೇನೆ. 19ಕ್ಕೆ ನಮ್ಮಿಂದ ಗೆದ್ದ ರಾಜಕಾರಣಿಗಳ ಮನೆಗೆ ಹೋಗಿ ನಿವೇದನ ಪತ್ರ ಕೊಡ್ತೇನೆ.
