ಉ.ಕ ಸುದ್ದಿಜಾಲ ರಾಯಬಾಗ :
ಅಲಕನೂರ ಗ್ರಾಮದ ಕರಿಸಿದ್ದೇಶ್ವರ ದೇವಸ್ಥಾನದ ಆನೆ ಸಾವು, ಕಳೆದ ಹಲವು ದಿನಗಳಿಂದ ಅಸ್ವಸ್ಥಗೊಂಡಿದ್ದ ಆನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಅಲಕನೂರ ಗ್ರಾಮದ ಕರಿಸಿದ್ದೇಶ್ವರ ದೇವಸ್ಥಾನ
25 ವರ್ಷಗಳ ಹಿಂದೆ ಮಠಕ್ಕೆ ತಂದಿದ್ದ ಆನೆ, ಧ್ರುವ, ರಾಜಾ ಎಂದು ನಾಮಕರಣ ಮಾಡಿದ್ದ ಆನೆ ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲಿ ಚಿಕಿತ್ಸೆ ಫಲಕಾರಿಯಾಗದೆ ಸಾವು.
ಇಂದು ಬೆಳಗಿನ ಜಾವ ಸಾವನ್ನಪ್ಪಿರುವ ಧ್ರುವ ಆನೆಗೆ ಇಂದು ಅಂತಿಮ ಸಂಸ್ಕಾರ ನಡೆಯಲಿದೆ. ಅಪಾರ ಅಭಿಮಾನಿಗಳ ಜೊತೆಗೆ ಪ್ರೀತಿ ಪ್ರೇಮ ವಾತ್ಸಲ್ಯ ಹೋಂದಿದ್ದ ಧ್ರವನನ್ನ ಕಳೆದು ಸ್ಥಳೀಯರು ಹಾಗೂ ಮಾವುತ ಕಣ್ಣೀರು ಹಾಕಿದ್ದಾರೆ.
