ಉ.ಕ ಸುದ್ದಿಜಾಲ ಬೆಳಗಾವಿ :
ಬೆಳಗಾವಿಯಲ್ಲಿ ಮತ್ತೆ ಕಬ್ಬಿನ ದರ ದಂಗಲ್ ಮಾಜಿ ಸಚಿವ ಶ್ರೀಮಂತ್ ಪಾಟೀಲ್ ಪುತ್ರ ಯೋಗೇಶ್ ಪಾಟೀಲ್ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಸಿಸ್ಮಾ ಅಧ್ಯಕ್ಷರಾಗಿರುವ ಯೋಗೇಶ್ ಪಾಟೀಲ್ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಬ್ಬಿಗೆ 3800 ದರ ನೀಡುವಂತೆ ರೈತ ಮುಖಂಡರ ಆಗ್ರಹ. ಕಬ್ಬಿಗೆ 3,600 ದರವನ್ನು ತಾತ್ಕಾಲಿಕವಾಗಿ ಒಪ್ಪಿಕೊಂಡಿದ್ದೇವೆ. ಬೆಳೆ ಸಂಪೂರ್ಣ ನಾಶವಾಗಿ ರೈತರು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಪೂಜ್ಯರು ಹಾಗೂ ಸಾವಿರಾರು ರೈತರ ಒತ್ತಾಯದ ಮೇರೆಗೆ 3600 ದರಕ್ಕೆ ಒಪ್ಪಿಗೆ. ಯೋಗಿಶ್ ಪಾಟೀಲ್ ರೈತರಿಗೆ ಮೋಸ ಮಾಡುತ್ತಿದ್ದಾರೆ ಎಂದು ರೈತ ಮುಖಂಡ ಚುನಪ್ಪ ಪೂಜಾರಿ ಗಂಭೀರ ಆರೋಪ ಮಾಡಿದ್ದಾರೆ.
ಸಕ್ಕರೆ ಬೆಲೆ 48ರಿಂದ 50 ಇದ್ದರೂ ರೈತರಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತವಾಗಿದ್ದು, ಕಾರ್ಖಾನೆಗಳು 3,800 ನೀಡಲು ಒಪ್ಪಿಕೊಂಡಿದ್ದರೂ ಒಳಸಂಚು ನಡೆಸಿದ ಆರೋಪ ಕೇಳಿ ಬಂದಿದೆ. ಸಕ್ಕರೆ ಬೆಲೆ ಆಧಾರದ ಮೇಲೆ ಕಬ್ಬಿನ ದರ ಘೋಷಣೆಯಾಗಲಿ ಎಂದು ಆಗ್ರಹ.
ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಾರವಾರ, ಹಾವೇರಿ, ಗದಗ ಸೇರಿದಂತೆ ಎಲ್ಲಾ ಜಿಲ್ಲೆಗಳ ರೈತರಿಗೂ 3,800 ದರ ನೀಡಲು ಆಗ್ರಹ. ಎಲ್ಲಾ ಜಿಲ್ಲೆಗಳಿಗೂ 3,800 ದರ ಸಿಗುವಂತೆ ವ್ಯವಸ್ಥೆ ಮಾಡಬೇಕು. ಬೇಡಿಕೆ ಈಡೇರದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ರೈತ ಸಂಘ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಆಗ್ರಹಿಸಿದ್ದಾರೆ.
