ಉ.ಕ ಸುದ್ದಿಜಾಲ ಅಥಣಿ :
ಗೌರಿ ಗಣೇಶ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಬೆಳಗಾವಿ ನಗರದ ಗಣೇಶ ಮಂಡಳಿಗಳು ಹಾಗೂ ಸಾರ್ವಜನಿಕರು ಹಬ್ಬವನ್ನು ಶಾಂತಿಯುತ ಮತ್ತು ನಿಯಮಾನುಸಾರ ಆಚರಿಸಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಸೂಚನೆಗಳನ್ನು ಹೊರಡಿಸಿದೆ.
ಅಥಣಿ ಪಟ್ಟಣದ ಪೊಲೀಸ್ ಭವನದಲ್ಲಿ ನಡೆದ ಶಾಂತಿ ಸಭೆಯಲ್ಲಿ, ಗೌರಿ ಗಣೇಶ ಹಾಗೂ ಮುಸ್ಲಿಂ ಸಮುದಾಯದ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಹಬ್ಬದ ಸಂದರ್ಭದಲ್ಲಿ ಶಾಂತಿ ಕಾಪಾಡುವಂತೆ, ಎಲ್ಲಾ ಆಯೋಜಕರು ಹಾಗೂ ಸಾರ್ವಜನಿಕರಿಗೆ ಸಲಹೆ ನೀಡಲಾಯಿತು.
ಪೊಲೀಸರ ಸೂಚನೆಗಳು ಹೀಗಿವೆ :
ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ: ಪೆಂಡಾಲ್, ವಿದ್ಯುತ್ ಸಂಪರ್ಕ ಹಾಗೂ ಮೂರ್ತಿ ಪ್ರತಿಷ್ಠಾಪನೆಗೆ ಸಂಬಂಧಿಸಿದ ಎಲ್ಲಾ ಪರವಾನಗಿಗಳನ್ನು ಸಂಬಂಧಪಟ್ಟ ಇಲಾಖೆಯಿಂದ ಮುಂಚಿತವಾಗಿ ಪಡೆಯಬೇಕು.
ಸಾರ್ವಜನಿಕ ಸುರಕ್ಷತೆ: ಗಣೇಶ ಮಂಡಳಿಗಳು ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಸುರಕ್ಷತಾ ಕ್ರಮ ಕೈಗೊಂಡು, ಅಗತ್ಯವಿರುವ ಕಡೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು.
ಪರಿಸರ ಸಂರಕ್ಷಣೆ :
ಮೂರ್ತಿಗಳ ಗಾತ್ರ ಮತ್ತು ವಸ್ತು ಪರಿಸರ ಸ್ನೇಹಿಯಾಗಿರಬೇಕು, ಹಾಗೂ ವಿಸರ್ಜನೆ ಪರಿಸರ ಮಾಲಿನ್ಯ ಉಂಟಾಗದ ರೀತಿಯಲ್ಲಿ ನಡೆಯಬೇಕು.
ಶಬ್ದ ನಿಯಂತ್ರಣ :
ಧ್ವನಿವರ್ಧಕ ಬಳಕೆ ನಿಯಮಿತ ಸಮಯಕ್ಕೆ ಮಾತ್ರ ಸೀಮಿತವಾಗಿರಬೇಕು ಮತ್ತು ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು.
ಈದ್ ಮಿಲಾದ್ ಹಬ್ಬದ ವೇಳೆಯೂ ಶಾಂತಿಯುತ ವಾತಾವರಣ ಕಾಪಾಡಿಕೊಳ್ಳುವಂತೆ ಕರೆ ನೀಡಿದ ಪೊಲೀಸರು, ಎಲ್ಲ ಸಮುದಾಯಗಳು ಸಹಕಾರ ನೀಡುವಂತೆ ಮನವಿ ಮಾಡಿದರು.
Vidio – ಬೆಳಗಾವಿಯಲ್ಲಿ ಗೌರಿ ಗಣೇಶ ಹಬ್ಬಕ್ಕೆ ಪೊಲೀಸ್ ಮಾರ್ಗಸೂಚಿ – ಅಥಣಿ ಪೋಲಿಸರ ಏನಂತ್ತಾರೆ?
