ಉ.ಕ ಸುದ್ದಿಜಾಲ ಅಥಣಿ :

ನಾಡ ಹಬ್ಬ ದಸರಾ ಉದ್ಘಾಟನೆಗೆ ಲೇಖಕಿ ಭಾನು ಮುಷ್ತಾಕ್ ಬಿಜೆಪಿ ವಿರೋಧ ವಿಚಾರ ಬಿಜೆಪಿ ತತ್ವ ಸಿದ್ಧಾಂತ ಹಿಂದುತ್ವ ಆಧಾರದ ಮೇಲೆ ಪಕ್ಷ ಅವತ್ತಿನಿಂದ ಇವತ್ತಿನವರೆಗೂ ಹಿಂದುತ್ವ ಆಧಾರದ ಮೇಲೆ ರಾಜಕೀಯ ಮಾಡುತ್ತಾರೆ ಹಿಂದುತ್ವ ಬಿಟ್ಟು ಅವರಿಗೆ ಬೇರೆ ಏನು ಉದ್ಯೋಗ ಮಾಡಬೇಕು? ಎಂದು ಆಕ್ರೋಶ ವ್ಯಕ್ತಪಡಿಸಿದ ಮಾಜಿ ಡಿಸಿಎಂ ಹಾಗೂ ಅಥಣಿ ಶಾಸಕ ಲಕ್ಷ್ನಣ ಸವದಿ

ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು ನಾವು ನೀವು ಹುಟ್ಟುವಾಗ ಇದೇ ಜಾತಿಯಲ್ಲಿ ಹುಟ್ಟುಬೇಕೆಂದು ಅರ್ಜಿ ಹಾಕಿ ಜನಿಸಿಲ್ಲ. ಆಕಸ್ಮಿಕವಾಗಿ ಜನನವಾಗಿದೆ ಜನನವಾದ ಮೇಲೆ ಜಾತಿ ಪಟ್ಟಿ ಕಟ್ಟಿಕೊಂಡಿದ್ದೇವೆ. ಏನು ಮಾಡೋಕೆ ಬರಲ್ಲ.

ಹಿಂದೆ ಕೂಡ ಇದೇ ರೀತಿ ನಡೆದಿದೆ ಮುಂದೆ ಕೂಡ ಇದೇ ರೀತಿ ನಡೆಯುತ್ತದೆ. ಬಿಜೆಪಿ ಪಕ್ಷ ಒಂದು ಅಜೆಂಡ ಮುಖಾಂತರ ರಾಜಕೀಯ ಮಾಡುತ್ತದೆ ಅಜಾಂಡ್ ಮುಖಾಂತರ ಅವರು ನಡೆದುಕೊಳ್ಳುತ್ತಾರೆ. ಕಾಂಗ್ರೆಸ್ ಸರ್ವ ಧರ್ಮ ಸಮಾನತೆ ಕಾನೂವ ಪಕ್ಷ ಎಂದ ಸವದಿ.