ಉ.ಕ ಸುದ್ದಿಜಾಲ ಅಥಣಿ :

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿಬ ಅಜುರೆ ಗ್ರಾಮದ ದಂಪತಿ ಯಲಗೊಂಡ ರಾಮಚಂದ್ರ ಸಾನೆ (67), ಪತ್ನಿ ಮಹಾದೇವಿ ಯಲಗೊಂಡ ಸಾನೆ (57) ಇಬ್ಬರು ಒಂದೇ ದಿನ ನಿಧನರಾಗಿದ್ದಾರೆ.

ಸಾವಿನಲ್ಲೂ ಒಂದಾಗಿದ್ದಾರೆ. ಕೊಲ್ಲಾಪುರದ ಮಗನ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಯಲಗೊಂಡ ಸಾನೆ ನಿಧನರಾದರು. ಬಳಿಕ ಅಂತ್ಯಕ್ರಿಯೆಗಾಗಿ ಶವವನ್ನು ಅಜುರೆಗೆ ತೆಗೆದುಕೊಂಡು ಹೋಗಲಾಯಿತು.

ಮನೆಯಲ್ಲಿ ವಿಧಿ-ವಿಧಾನ ಮುಗಿಸಿ ರುದ್ರಭೂಮಿಗೆ ಕರೆದೊಯ್ಯುತ್ತಿದ್ದಂತೆ ಇತ್ತ ಮನೆಯಲ್ಲಿ ಪತ್ನಿ ಮಹಾದೇವಿ ಸಾನೆ ಕೂಡ ಮೃತಪಟ್ಟಿದ್ದಾರೆ. ಬಳಿಕ ಪತಿ-ಪತ್ನಿ ಇಬ್ಬರನ್ನೂ ಒಂದೇ ಚಿತೆಯಲ್ಲಿ ಅಂತ್ಯಕ್ರಿಯೆ ಮಾಡಲಾಯಿತು. ಸಾವಿನಲ್ಲೂ ಒಂದಾದ ಸಾನೆ ದಂಪತಿಯನ್ನು ಕಂಡು ಗ್ರಾಮ ಶೋಕದಲ್ಲಿ ಮುಳುಗಿತ್ತು.