ಉ‌.ಕ ಸುದ್ದಿಜಾಲ ಅಥಣಿ :

ಹಳ್ಳಿಯಲ್ಲಿ ಹುಟ್ಟಿ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆದ ಯುವಕ ಇಂಗ್ಲೆಂಡ್ ನ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಯೂನಿವರ್ಸಿಟಿ ಆಫ್ ಲಿವರ್ ಫುಲ್ ನಲ್ಲಿ ಪದವಿ ಮುಗಿಸಿ ಪ್ರಥಮ ಶ್ರೇಣಿಯಲ್ಲಿ ಉತ್ತಿರ್ಣನಾಗಿ ಗ್ರಾಮಕ್ಕೆ ಹೆಮ್ಮೆ ತಂದಿದ್ದಾನೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಬರಗಿ ಗ್ರಾಮದ ಯುವಕ ಪ್ರಸಾದ ಪಾಂಡುರಂಗ ಕೋಳಿ ಉನ್ನತ ಪದವಿ ಶೈಕ್ಷಣಿಕ ವಿದ್ಯಾಭ್ಯಾಸಕ್ಕಾಗಿ ಇಂಗ್ಲೆಡ್ ದೇಶಕ್ಕೆ ತೆರಳಿದ್ದರು, ಎಮ್ ಎಸ್ ಸಿ (Master of Science) ಪದವಿ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿ ಪಡೆದು ಗ್ರಾಮದ ಕೀರ್ತಿ ಹೆಚ್ಚಿಸಿದ್ದಾರೆ.

01 ರಿಂದ 5 ತರಗತಿ ವರೆಗೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಪಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿ ಹಾಗೂ 7-8 ನೇ ತರಗತಿ ಅಥಣಿ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನದಿ-ಇಂಗಳಗಾಂವಿನಲ್ಲಿ ಮುಗಿಸಿದ್ದಾರೆ.

ಹೈಸ್ಕೂಲ್ ಶಿಕ್ಷಣವನ್ನ ಸಂಕೋನಟ್ಟಿ ಹೈಸ್ಕೂಲ್ ಸಂಕೋನಟ್ಟಿಯಲ್ಲಿ ಉತ್ತೀರ್ಣರಾಗಿ. ಕಾಲೇಜು ಶಿಕ್ಷಣವನ್ನ ಅಥಣಿಯ ಕಲಾ ಮತ್ತು ವಿಜ್ಞಾನ ಪದವಿ ಪೂರ್ವ ಕಾಲೇಜು ಬಣಜವಾಡ ಕಾಲೇಜಿನಲ್ಲಿ ಮುಗಿಸಿದ್ದಾರೆ.

ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಕಾರವಾರ, ಹಾಗೂ ಬಾಳೆಕುಂದ್ರಿ ಇಂಜಿನಿಯರಿಂಗ್ ಕಾಲೇಜು ಬೆಳಗಾವಿಯಲ್ಲಿ ಬಿ ಇ ಪದವಿ ಮುಗಿಸಿ, ಉನ್ನತ ಎಮ್ ಎಸ್ ಸಿ (MSc) ಪದವಿ ಶಿಕ್ಷಣಕ್ಕಾಗಿ ಇಂಗ್ಲೆಂಡ್ ಗೆ ತೆರಳಿ 2025 ರ ಮೋಸ್ಟ ಟಾಪರ್ ಒಫ್ ದಿ ಯುನಿವರ್ಸಿಟಿ ಲಿಸ್ಟ್ ನಲ್ಲಿ ಹೆಸರು ಗುರುತಿಸಿಕೊಂಡಿದ್ದಾರೆ.