ಉ.ಕ‌ ಸುದ್ದಿಜಾಲ ಬಾಗಲಕೋಟೆ :

ಮುಳುಗಡೆ ಸಂತ್ರಸ್ತರಿಗೆ ದೇವಸ್ಥಾನದ ಹೆಸರಿನಲ್ಲಿ ಅಸ್ಪೃಶ್ಯತೆ ಕಟ್ಟುಪಾಡು, ಪ್ರಾದೇಶಿಕ ಆಯುಕ್ತರ ಮುಂದೆ ದೇವರ ಬಗ್ಗೆ ಭಯ ವ್ಯಕ್ತಪಡಿಸಿದ ದಲಿತ ಮಹಿಳೆ. ಪುನರ್ವಸತಿ ಕೇಂದ್ರಕ್ಕೆ ತೆರಳಿದ್ರೆ ದೇವರು ಕಾಡುತ್ತೆ ಎಂದು ನಂಬಿರೋ ದಲಿತ ಕುಟುಂಬಗಳು.

ಎಸ್ಸಿ ಮಂದಿ ಆ ದೇವರ ದಾಟಿ ಹೊಗಂಗಿಲ್ಲ ರಿ, ನಮ್ಮ ಮಕ್ಕಳಿಗೆ ಕಾಡಾಟ ಶುರು ಆಗುತ್ತೆ ಎನ್ನೋ ಮಹಿಳೆ. ದಲಿತರು ದೇವಸ್ಥಾನ ದಾಟಿ ಮುಂದೆ ಹೋಗುವಂತಿಲ್ಲ ಎಂಬ ಕಟ್ಟುಪಾಡಿನ ಮನಸ್ಥಿತಿ.
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಿರ್ಜಿ ಗ್ರಾಮದಲ್ಲಿ ಪ್ರಾದೇಶಿಕ ಆಯುಕ್ತರ ಮುಂದೆ ನಡೆದ ಘಟನೆ.

ಘಟಪ್ರಭಾ ನದಿ ಪ್ರವಾಹ ಹಿನ್ನೆಲೆ ಕಾಳಜಿ ಕೇಂದ್ರಕ್ಕೆ ಭೇಟಿ. ಮಿರ್ಜಿ ಗ್ರಾಮದ ಕಾಳಜಿ ಕೇಂದ್ರದಲ್ಲಿರೋ ಕುಟುಂಬಗಳು. ಪ್ರತಿ ವರ್ಷ ಪ್ರವಾಹಕ್ಕೆ ತುತ್ತಾಗಿವ ಕುಟುಂಬಗಳು. ಬೆಳಗಾವಿ ಪ್ರಾದೇಶಿಕ ಆಯುಕ್ತೆ ಜಾನಕಿ ಕೆ. ಎಂ, ಎಸಿ ಶ್ವೇತಾ ಬೀಡಿಕರ್, ಹಾಗೂ ದಲಿತ ಮಹಿಳೆಯ ನಡುವೆ ನಡೆದ ಸಂಭಾಷಣೆ. ನಿಮ್ಮನ್ನು ಅಲ್ಲಿ ಬಿಡೋದಕ್ಕೆ ವ್ಯವಸ್ಥೆ ಮಾಡ್ತೀವಿ,

ಮಲ್ಲಾಪುರ ಪುನರ್ವಸತಿ ಕೇಂದ್ರಕ್ಕೆ ಹೋಗ್ತೀರಾ ಎಂದು ಕೇಳಿದ ಅಧಿಕಾರಿಗಳು. ನಮಗೆ ಅಲ್ಲಿ ಹೋದಾಗ ಏನಾದ್ರು ಆದ್ರೆ ಹೆಂಗ್ರಿ..? ಮತ್ತೆ ಇಲ್ಲಿ ಏನಾದ್ರು ಆದ್ರೆ ಎನ್ ಮಾಡ್ತೀರಿ ಎಂದು ಪ್ರಶ್ನಿಸಿದ ಆಯುಕ್ತೆ ಜಾನಕಿ.. ಇಲ್ಲಿ ನೀರಲ್ಲಿ ಮುಳುಗಿ ಏಳತೀವಲ್ಲರಿ ಅದಕ್ಕೆ ನಿಮ್ಮನ್ನ ಶಿಫ್ಟ್ ಮಾಡ್ತೀವಿ ಎಂದ ಎಸಿ..

ಬ್ಯಾಡರಿ ಮಲ್ಲಾಪುರದಾಗ ನಮಗ ಏನರ ಆದ್ರ ಹೆಂಗ್ರಿ, ಅಲ್ಲಿ ದೇವ್ರು ಬೆರಿಕಿ ಐತಿ, ಬಹಳ ಕೆಟ್ಟ ದೇವ್ರು ಐತ್ರಿ.. ನಮ್ಮ ಹುಡುಗುರಿಗೆ, ಮಕ್ಕಳಿಗೆ ಕಾಡಾಟ ಶುರು ಆಗತ್ರಿ. ನಮ್ಮ ಮಂದಿ ಅದಕ್ಕ ಅಲ್ಲಿ ಹೋಗಲ್ಲ ರಿ, ಎಸ್ಸಿ ಮಂದಿ ಆ ಕಡೆ ಹೋಗಲ್ಲ ರಿ ಎಂದ ಮಹಿಳೆ.

ಈ ವೇಳೆ ಆ ದೇವಸ್ಥಾನ ದಾಟಿ ಎಸ್ಸಿ ಜನಾಂಗದವರು ಮುಂದೆ ಹೋಗಲ್ಲ ಮೇಡಂ ಎಂದ ಗ್ರಾಮಸ್ಥ. ಮಹಿಳೆಯ ಮಾತು ಕೇಳಿ ನಕ್ಕ ಅಧಿಕಾರಿಗಳು.