ಉ.ಕ ಸುದ್ದಿಜಾಲ ಬೆಳಗಾವಿ :
ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಡಿಸಿಸಿ ಬ್ಯಾಂಕ್) ಚುನಾವಣೆಗೆ ಕಾಗವಾಡ ಮತಕ್ಷೇತ್ರದ ಅಭ್ಯರ್ಥಿಯಾಗಿ ಮಾಜಿ ಸಚಿವ ಶ್ರೀಮಂತ ಪಾಟೀಲ ಹಿರಿಯ ಸುಪುತ್ರ ಶ್ರೀನಿವಾಸ ಪಾಟೀಲ ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಕಾಗವಾಡ ಶಾಸಕ ರಾಜು ಕಾಗೆ ವಿರುದ್ದ ಮಾಜಿ ಸಚಿವ ಶ್ರೀಮಂತ ಪಾಟೀಲ ಸ್ಪರ್ಧೆ ಮಾಡಿದ್ದಾರೆ. ರೈತರ ಒತ್ತಾಸೆಯಿಂದ ಇಂದು ನಾಮಪತ್ರ ಸಲ್ಲಿಕೆ ಮಾಡಿರುವ ಉದ್ಯಮಿ ಶ್ರೀನಿವಾಸ ಪಾಟೀಲ.
ರೈತ ಬಾಂಧವರ ಪ್ರಗತಿ, ಪಿಕೆಪಿಎಸ್ ಆಡಳಿತ ಮಂಡಳಿಯ ಬಲ, ಹಾಗೂ ಸಹಕಾರ ಚಳವಳಿಯ ಶ್ರೇಯಸ್ಸಿಗಾಗಿ ನಿಷ್ಠೆ, ಪಾರದರ್ಶಕತೆ ಮತ್ತು ಜನಪರ ನಿಲುವುಗಳೊಂದಿಗೆ ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವುದು ನಮ್ಮ ದೃಢ ಸಂಕಲ್ಪವಾಗಿದೆ.
ನಮ್ಮ ಕಾಗವಾಡ ಮತಕ್ಷೇತ್ರದ ರೈತ ಬಾಂಧವರು, ಪಿಕೆಪಿಎಸ್ ಆಡಳಿತ ಮಂಡಳಿಯ ಸದಸ್ಯರು ಹಾಗೂ ಸಹಕಾರದ ನಂಬಿಕಸ್ಥ ಕಾರ್ಯಕರ್ತರ ಆಶೀರ್ವಾದ ನಮ್ಮ ಮೇಲೆ ಇರಲಿ.
ನಿಮ್ಮ ನಂಬಿಕೆಯಿಂದಲೇ ಬದಲಾವಣೆಯ ಹೊಸ ದಿಕ್ಕು! ಎಂದು ತಮ್ಮ ಫೇಸಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಉದ್ಯಮಿ, ಮಾಜಿ ಶಾಸಕ ಶ್ರೀಮಂತ ಪಾಟೀಲ ಸುಪುತ್ರ ಶ್ರೀನಿವಾಸ ಪಾಟೀಲ.
ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಾಮಪತ್ರ ಸಲ್ಲಿಸಿದ ಮಾಜಿ ಸಚಿವ ಶ್ರೀಮಂತ ಪಾಟೀಲ ಹಿರಿಯ ಸುಪುತ್ರ ಶ್ರೀನಿವಾಸ ಪಾಟೀಲ
