ಉ.ಕ ಸುದ್ದಿಜಾಲ ಬೆಳಗಾವಿ :

ತಲೆಯ ಮೇಲೆ ಕಾದ ಎಣ್ಣೆ ಸುರಿದು ಪತಿಯ ಕೊಲೆಗೆ ಯತ್ನಿಸಿದ ಪತ್ನಿ ಬೆಳಗಾವಿ ತಾಲೂಕಿನ ಮಚ್ಚೆ ಗ್ರಾಮದ ರಾಮನಗರದಲ್ಲಿ ನಡೆದ ಘಟನೆ. ರಾಮನಗರದ ನಿವಾಸಿ ವೈಶಾಲಿ ಪಾಟೀಲ್ (48) ಮಹಿಳೆಯಿಂದ ಕೌರ್ಯ.

ಪತಿ ಸುಭಾಷ ಪಾಟೀಲ್(55) ಎಂಬಾತನ ಮೇಲೆ ಕಾದ ಎಣ್ಣೆ ಸುರಿದು ವಿಕೃತಿ. ಗಂಭೀರ ಗಾಯಗೊಂಡ ಸುಭಾಷ್‌ಗೆ ಬೆಳಗಾವಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ. ಸುಡುವ ಕಾದ ಎಣ್ಣೆ ತಲೆಯ ಮೇಲೆ ಹಾಕಿದ್ದರಿಂದ 60ರಷ್ಟು ಸುಟ್ಟ ಸುಭಾಷ ದೇಹ.

ಪಾಪಿ ಹೆಂಡತಿ ಕೌರ್ಯಕ್ಕೆ ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ಗಂಡ ಸುಭಾಷ ಪಾಟೀಲ್. ಪರಸ್ರ್ತೀಯೊಂದಿಗೆ ಗಂಡನ ಸಂಬಂಧ ಹೊಂದಿದ್ದಾನೆಂದು ಸಂಶಯ ಪಡ್ತಿದ್ದಳಂತೆ ಹೆಂಡತಿ ವೈಶಾಲಿ. ಇದೇ ಕಾರಣಕ್ಕೆ ಹಲವಾರು ಬಾರಿ ಮನೆಯಲ್ಲಿ ಗಂಡ-ಹೆಂಡತಿ ಇಬ್ಬರ ನಡುವೆಯೂ ಗಲಾಟೆ.

ತಲೆಯ ಮೇಲೆ ಎಣ್ಣೆ ಹಾಕಲು ಪತ್ನಿಯ ಸಂಶಯವೇ ಕಾರಣ ಎಂದು ಪ್ರಾಥಮಿಕ ಮಾಹಿತಿ. ಕಳೆದ ಇಪ್ಪತ್ತು ವರ್ಷಗಳಿಂದ ಗ್ಯಾಸ ಸಪ್ಲೈಯರ ಆಗಿ ಕೆಲಸ ಮಾಡ್ತಿದ್ದ ಸುಭಾಷ್. ಎಂದಿನಂತೆ ಗ್ಯಾಸ್ ಸಪ್ಲೈ ಕೆಲಸ ಮುಗಿಸಿ ಮನೆಯಲ್ಲಿ ಕುಳಿತಾಗ ಕಾದ ಎಣ್ಣೆಯನ್ನೇ ತಲೆಯ ಮೇಲೆ ಹಾಕಿದ ಹೆಂಡತಿ.

ಗಾಯಗೊಂಡ ಸುಭಾಷನನ್ನು ಸದ್ಯ ಸ್ಥಳೀಯ ಸಹಾಯದೊಂದಿಗೆ ಬಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲು. ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ಸುಭಾಷ್ ಪಾಟೀಲ ರವಾನೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.