ಉ.ಕ ಸುದ್ದಿಜಾಲ ಬೆಳಗಾವಿ :
ಬೆಳಗಾವಿಯಲ್ಲಿ ಕರಾಳ ದಿನಾಚರಣೆ ಭಾಗಿಯಾಗಿದ್ದವರಿಗೆ ಬಿಸಿಮಟ್ಟಿಸಿದ ಪೊಲೀಸರು. 150ಕ್ಕೂ ಎಂಇಎಸ್ ಪುಂಡರ ವಿರುದ್ಧ ಎಫ್ಐಆರ್ ದಾಖಲಿಸಿದ ಪೊಲೀಸರು. ಮಾರ್ಕೆಟ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ 150ಕ್ಕೂ ಅಧಿಕ ಜನರ ವಿರುದ್ಧ ಪ್ರಕರಣ ದಾಖಲು.
ಕನ್ನಡ ರಾಜ್ಯೋತ್ಸವದ ಪ್ರತಿಯಾಗಿ ಕರಾಳ ದಿನಾಚರಣೆ ಮಾಡಿದ್ದ ಎಂಇಎಸ್ ನಾಯಕರು. ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು. ಮಾರ್ಕೆಟ್ ಪಿಎಸ್ಐ ವಿಠ್ಠಲ ಹಾವನ್ನವರಿಂದ ಎಂಇಎಸ್ ವಿರುದ್ಧ ದೂರು.
ಮಹಾರಾಷ್ಟ್ರಕ್ಕೆ ಜಯಕಾರ ಕೂಗಿದ್ದ ಎಂಇಎಸ್ ಪುಂಡರು. ನಾಡದ್ರೋಹಿ ಕೃತ್ಯ ಎಸಗಿದವರ ವಿರುದ್ಧ ಕ್ರಮಕ್ಕೆ ಮುಂದಾದ ಬೆಳಗಾವಿ ಪೊಲೀಸರು.
150ಕ್ಕೂ ಹೆಚ್ಚು ಎಂಇಎಸ್ ಪುಂಡರ ವಿರುದ್ಧ ಎಫ್ಐಆರ್ ದಾಖಲು

