ಉ‌.ಕ ಸುದ್ದಿಜಾಲ ಬೆಳಗಾವಿ :

ಉದ್ಯೋಗ ಕೊಡಿಸುವುದಾಗಿ ಅನೇಕರ ಜನರಿಂದ ಹಣ ಪಡೆದು ವಂಚನೆ ಮಾಡಿರೋ ಹೊಸ ಪ್ರಕರಣ ಬೆಳಗಾವಿಯಲ್ಲಿ ಹೊರ ಬಂದಿದೆ. ಇದಕ್ಕಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೆಸರನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ. ಇನ್ನೂ ಪ್ರಕರಣದಲ್ಲಿ ಹೆಬ್ಬಾಳ್ಕರ್ ಆಪ್ತ ಸಂಗನಗೌಡ ಪಾಟೀಲ್ ಹೆಸರು ತಳಕು ಹಾಕಿಕೊಂಡಿದೆ. ರಾಜ್ಯಪಾಲರ ಸಹ ಇರೋ ನೇಮಕಾತಿ ಪತ್ರಗಳನ್ನು ನೀಡಿ ವಂಚನೆ ಮಾಡಲಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೆಸರಿನಲ್ಲಿ ನಡೆದಿರೋ ವಂಚನೆ ಪ್ರಕರಣದ ಒಂದು ಝಲಕ್. ಯಸ್ ಹೀಗೆ ಹಣ ಪಡೆಯುತ್ತಿರೋ ವ್ಯಕ್ತಿಯ ಹೆಸರು ಮಂಜುನಾಥ ಮಲಸರ್ಜ. ಈತನಿಂದ 16 ಜನರಿಗೆ ಮೋಸವಾಗಿರೋ ಪ್ರಕರಣ ಸದ್ಯ ಬಯಲಾಗಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ವಿವಿಧ ಹುದ್ದೆಗಳನ್ನು ಕೊಡುಸುವದಾಗಿ ಖಾನಾಪುರ ತಾಲೂಕಿನ ಹಲವು ಗ್ರಾಮಗಳ ಜನರಿಗೆ ಮೋಸ ಮಾಡಲಾಗಿದೆ. ಇನ್ನೂ ಸಚಿವೆ ಹೆಬ್ಬಾಳ್ಕರ್ ಆಪ್ತ ಸಂಗನಗೌಡ ಪಾಟೀಲ್ ಹೆಸರು ಸಹ ತಳಕು ಹಾಕಿಕೊಂಡಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಇಂದು ಸಮಾಜಿಕ ಹೋರಾಟಗಾರ ಜಯಂತ್ ತಿಣೇಕರ್ ಈ ಬಗ್ಗೆ ದಾಖಲೆ ಬಿಡುಗಡೆ ಮಾಡಿದ್ದಾರೆ.

ರಾಜ್ಯ ಸರ್ಕಾರದ ಲಾಂಛನ ಹಾಗೂ ರಾಜ್ಯಪಾಲರ ಸಹಿ ಮಾಡಿರೋ ನಕಲಿ ನೇಮಕಾತಿ ಪತ್ರಗಳನ್ನು ನೀಡಲಾಗಿದೆ. ಒಬ್ಬರಿಂದ 3-4 ಲಕ್ಷ ರೂಪಾಯಿ ಹಣವನ್ನು ಪಡೆದು ವಂಚನೆ ಮಾಡಲಾಗಿದೆ. ಬೈಲಹೊಂಗಲ ಹಾಗೂ ಬೆಳಗಾವಿ ಸೇರಿ 16 ಜನರಿಗೆ ಧೋಖಾ ಮಾಡಲಾಗಿದೆ.

ಫೋನ್ ಪೇ, ಬ್ಯಾಂಕ್ ಅಕೌಂಟ್ ಮೂಲಕ 34 ಲಕ್ಷ ರೂಪಾಯಿ ಹಣ ಪಡೆದು ವಂಚನೆ ಮಾಡಲಾಗಿದೆ. ಇನ್ನೂ ವಂಚನೆ ಬಗ್ಗೆ ನಾವು ದೂರು ಕೊಟ್ಟರು ಸ್ವೀಕಾರ ಮಾಡುತ್ತಿಲ್ಲ. ನಮ್ಮದು ಖಾನಾಪುರ ತಾಲೂಕಿನ ಗಂದಿಗವಾಡ ಗ್ರಾಮ ನಮ್ಮದು ನಂದಗಡ ಪೊಲೀಸ್ ಠಾಣಾ ವ್ಯಾಪ್ತಿಯನ್ನು ಹೊಂದಿದೆ.

ಆದರೇ ನಮ್ಮನ್ನು ಕಿತ್ತೂರು ಪೊಲೀಸ್ ಠಾಣೆಗೆ ಕರೆದು ಕಿರಕುಳ ನೀಡುತ್ತಿದ್ದಾರೆ. ನಾವು ಲಿಖಿತ ದೂರು ಕೊಟ್ಟರು ಪೊಲೀಸರು ಸ್ವೀಕಾರ ಮಾಡಿಲ್ಲ ಎಂದು ಕಾವ್ಯ ಎನ್ನುವ ನೊಂದ ಯುವತಿ ಆರೋಪ ಮಾಡಿದ್ದಾಳೆ.

ಮಂಜುನಾಥ್ ಮಲಸರ್ಜ ಸಂಗನಗೌಡ ಪಾಟೀಲ್ ಕಾರ್ ಚಾಲಕ ಎಂದು ಹೇಳಲಾಗುತ್ತಿದೆ. ಈಗಾಗಲೇ ಪ್ರಕರಣ ಸಂಬಂಧ ಇನ್ನೂ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿಲ್ಲ. ಆದರೂ ಪೊಲೀಸರು ಅನೇಕ ನೊಂದ ಯುವಕರಿಗೆ ಕರೆದು ವಿಚಾರಣೆ ಮಾಡಿದ್ದಾರೆ.

ನಾವು ಗೃಹ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದ್ರು ಯಾವುದೇ ಪ್ರಯೋಜವಾಗಿಲ್ಲ. ಹೀಗಾಗಿ ಸೂಕ್ತ ಕ್ರಮ ಕೈಗೊಂಡು ನಮ್ಮಗೆ ನ್ಯಾಯ ಕೊಡಿಸಬೇಕು ಎಂದು ಹಣ ಕಳೆದುಕೊಂಡವರು ಆಗ್ರಹಿಸಿದ್ದಾರೆ.