ಉ.ಕ ಸುದ್ದಿಜಾಲ ಬೆಳಗಾವಿ :
ದಾರುಣ ಅಂತ್ಯ ಕಂಡ ಬೆಳಗಾವಿಯ ಲವ್ ಬರ್ಡ್ಸ್, ಪ್ರೇಯಸಿಗೆ 9 ಸಲ ಚಾಕುವಿನಿಂದ ಚುಚ್ಚಿ ತಾನೂ ಆತ್ಮಹತ್ಯೆಗೆ ಶರಣಾದ ಪಾಗಲ್ ಪ್ರೇಮಿ, ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ಘಟನೆ. ಮದುವೆ ಬಳಿಕವೂ ವಿವಾಹಿತೆ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ ಪಾಗಲ್ ಪ್ರೇಮಿ.
ನನ್ನ ಪತ್ನಿಯಂತೆ ನೀನೂ ನನ್ನ ಮಾತು ಕೇಳಬೇಕು ಎಂದು ಪೀಡಿಸುತ್ತಿದ್ದ ಆಸಾಮಿ, ಖಾನಾಪುರ ತಾಲೂಕಿನ ಬೀಡಿ ಗ್ರಾಮದ ರೇಷ್ಮಾ ತಿರವಿರ (29) ಕೊಲೆಯಾದ ದುರ್ದೈವಿ. ಪ್ರೇಯಸಿ ಸಾವನಪ್ಪುತ್ತಿದ್ದಂತೆ ಭಯಗೊಂಡು ತಾನೂ ಅದೇ ಚಾಕುವಿನಿಂದ ಚುಚ್ಚಿಕೊಂಡ ಪಾಗಲ್ ಪ್ರೇಮಿ.
ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಆನಂದ ಸತಾರ್‌ನನ್ನು (31) ಆಸ್ಪತ್ರೆಗೆ ದಾಖಲಿಸಿದ್ದ ಸ್ಥಳೀಯರು. ಚಿಕಿತ್ಸೆ ಫಲಿಸದೇ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಆನಂದ ಸುತಾರ್ ಸಾವು. ಮದುವೆ ಬಳಿಕವೂ ರೇಷ್ಮಾ ಜೊತೆಗೆ 3 ವರ್ಷಗಳಿಂದ ಸಲುಗೆ ಹೊಂದಿದ್ದ ಆನಂದ ಸುತಾರ್.
ಮೂರು ಮಕ್ಕಳನ್ನು ಹೊಂದಿದ್ದ ಆನಂದ, ಎರಡು ಮಕ್ಕಳನ್ನು ಹೊಂದಿರುವ ರೇಷ್ಮಾ. ಒಂದೇ ಊರಿನ, ಒಂದೇ ಕಾಲನಿಯ ಇಬ್ಬರ ಮಧ್ಯೆ ಹಲವು ವರ್ಷಗಳಿಂದ ಸ್ನೇಹ. ಮದುವೆ ಬಳಿಕ ಇಬ್ಬರ ಮಧ್ಯೆ ಹೆಚ್ಚಾದ ಸಲುಗೆ, 3 ವರ್ಷಗಳಿಂದ ಅನೈತಿಕ ಸಂಬಂಧ.
ಕಳೆದ ತಿಂಗಳಷ್ಟೇ ರೇಷ್ಮಾ ಪತಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ ಲವ್ ಬರ್ಡ್ಸ್. ನಂದಗಡ ಪೊಲೀಸರಿಗೆ ಮಾಹಿತಿ ನೀಡಿದ್ದ ರೇಷ್ಮಾ ಪತಿ ಶೀವು ತಿರವಿರ. ಪೊಲೀಸರ ವಾರ್ನ್ ಬಳಿಕ ಆನಂದನಿಂದ ಅಂತರ ಕಾಯ್ದುಕೊಂಡಿದ್ದ ರೇಷ್ಮಾ.
ಇಷ್ಟಕ್ಕೆ ಸಿಟ್ಟಿಗೆದ್ದು ಮನೆಯ ಹಿಂಬಾಗಿಳಿನಿಂದ ಹೋಗಿ ರೇಷ್ಮಾ ಬರ್ಬರ ಹತ್ಯೆ. ರೇಷ್ಮಾ ಪುತ್ರಿಯ ಎದುರೇ ಚಾಕುವಿನಿಂದ 9 ಸಲ ಚುಚ್ಚಿದ ಪಾಗಲ್ ಪ್ರೇಮಿ ಆನಂದ.
ಫರ್ನಿಚರ್ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಆನಂದ ಸುತಾರ್. ಮದುವೆ ಬಳಿಕದ ಅನೈತಿಕ ಸಂಬಂಧಕ್ಕೆ ಲವ್ ಬರ್ಡ್ಸ್ ದಾರುಣ ಅಂತ್ಯ, ಅನಾಥವಾದ ಮಕ್ಕಳು.
ಪ್ರೇಯಸಿಗೆ 9 ಸಲ ಚಾಕುವಿನಿಂದ ಚುಚ್ಚಿ ತಾನೂ ಆತ್ಮಹತ್ಯೆಗೆ ಶರಣಾದ ಪಾಗಲ್ ಪ್ರೇಮಿ
