ಉ.ಕ ಸುದ್ದಿಜಾಲ ಬೆಳಗಾವಿ :
ಅಭಿವೃದ್ಧಿಯ ತಾರತಮ್ಯ ವಿಚಾರದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅಸಮಾಧಾನ. ಅಧಿವೇಶನದ ಹೊತ್ತಲ್ಲೇ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಚರ್ಚೆ ಮತ್ತೇ ಮುನ್ನಲೆಗೆ. ಪ್ರತ್ಯೇಕ ರಾಜ್ಯದ ಚರ್ಚೆಗೆ ಮುನ್ನುಡಿ ಬರೆದ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ.
ದಿ. ಉಮೇಶ ಕತ್ತಿ ನೆನೆದು ಉ.ಕ ಪ್ರತ್ಯೇಕ ರಾಜ್ಯ ಆದ್ರೆ ಒಳ್ಳೆಯದು ಅನಿಸುತ್ತೆ. ಬೆಳಗಾವಿಯಲ್ಲಿ ಅಸಮಾಧಾನ ಹೊರಹಾಕಿದ ಶಾಸಕ ಬಾಲಚಂದ್ರ ಜಾರಕಿಹೊಳಿ. ಉತ್ತರ ಕರ್ನಾಟಕ ಅಭಿವೃದ್ಧಿ ಆಗತ್ತಿಲ್ಲ ಎಂದು ಮಾಧ್ಯಮಗಳ ಪ್ರಶ್ನೆ. ನಿರೀಕ್ಷಿತ ಪ್ರಮಾಣದಲ್ಲಿ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಆಗ್ತಿಲ್ಲ.
ಈ ಸಂದರ್ಭದಲ್ಲಿ ನಮ್ಮೆಲ್ಲರಿಗೂ ಉಮೇಶ್ ಕತ್ತಿ ನೆನಪು ಆಗುತ್ತಾರೆ. ಉಮೇಶ್ ಕತ್ತಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬೇಕು ಅಂತಾ ಕೂಗು ಹಾಕ್ತಿದ್ದರು. ಪ್ರತ್ಯೇಕ ರಾಜ್ಯ ಆದ್ರೆ ಬೆಳಗಾವಿ ರಾಜಧಾನಿ ಆಗುತ್ತೇ. ಆಗ ಉತ್ತರ ಕರ್ನಾಟಕ ಅಭಿವೃದ್ಧಿ ಆಗುತ್ತೇ ಅಂತಾ ಹೇಳ್ತಿದ್ದರು.
ದಕ್ಷಿಣ ಕರ್ನಾಟಕದಷ್ಟು ಉತ್ತರ ಕರ್ನಾಟಕದ ಅಭಿವೃದ್ಧಿ ಆಗ್ತಿಲ್ಲ. ಇಂದಲ್ಲ, ನಾಳೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗೇ ಆಗುತ್ತೆ. ಐದು ವರ್ಷ, ಇಲ್ಲವೇ ಹತ್ತು ಬಿಟ್ಟು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗುತ್ತೆ, ಪ್ರತ್ಯೇಕ ರಾಜ್ಯ ಆದಾಗ ನಮ್ಮ ಬೆಂಬಲವಿದೆ ಎಂದ ಬಾಲಚಂದ್ರ ಜಾರಕಿಹೊಳಿ.
