ಉ.ಕ ಸುದ್ದಿಜಾಲ ಚಿಕ್ಕಬಳ್ಳಾಪೂರ :

ತನ್ನ ಸ್ವಂತ ಅತ್ತೆ ಮಗಳ ಮೇಲೆ ಪ್ರಾಣವನ್ನೇ ಇಟ್ಟುಕೊಂಡಿದ್ದ, ಚಿಕ್ಕವಯಸ್ಸಿನಿಂದಲೂ ಆಕೆಯನ್ನೇ ಪ್ರೀತಿಸಿ ಮಧುವೆಯಾಗುವುದಾಗಿ ಎಲ್ಲಾ ಕಡೆ ಹೇಳಿಕೊಂಡಿದ್ದ. ಆದರೆ, ಆತನನ್ನು ಮಧುವೆಯಾಗಲು ಅತ್ತೆ ಮಗಳಿಗೆ ಬಿಲ್‌ ಕುಲ್‌ ಇಷ್ಟ ಇರಲಿಲ್ಲ, ಮಗಳಿಗೆ ಇಷ್ಟವಿಲ್ಲದೆ ನಾವು ಮದುವೆ ಮಾಡಲ್ಲ ಎಂದು ಅತ್ತೆ ಹೇಳಿದ್ಳು. ಆದರೆ ತನ್ನವಳು ಸಿಗಲ್ಲ ಎಂದ ತಕ್ಷಣ ಆಕೆಯನ್ನು ಕೊಂದು ತಾನು ಸಾಯಲು ತೀರ್ಮಾನ ಮಾಡಿದ್ದು ಏನೋ ಮಾಡಲು ಹೋಗಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಬಶೆಟ್ಟಿಹಳ್ಳಿ ನಿವಾಸಿ ಚಿಂತಾಮಣಿ ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದ ಅನಂದ್ ಕುಮಾರ್ ಕೆ . ಚಿಂತಾಮಣಿ ತಾಲ್ಲೂಕಿನ ಸದ್ದುಪಲ್ಲಿ ಗ್ರಾಮದ ತನ್ನ ಅತ್ತೆ ಮಗಳನ್ನ ಪ್ರೀತಿಸುತ್ತಿದ್ದ… ಆದ್ರೆ ಈತನ ಪ್ರೀತಿಯ ಸಹವಾಸ ಬೇಡ ಅಂತ ಯುವತಿ ಪೋಷಕರು ಯುವತಿಯನ್ನ ಚಿಕ್ಕಬಳ್ಳಾಫುರ ತಾಲೂಕಿನ ಮಂಚನಬಲೆ ಗ್ರಾಮದ ಮಾವನ ಮನೆಯಲ್ಲಿ ಬಿಟ್ಟಿದ್ದರು.

ಚಿಕ್ಕಬಳ್ಳಾಪುರದಲ್ಲಿ ಪದವಿ ವ್ಯಾಸಂಗ ಮಾಡ್ತಿದ್ದ ವೈಶಾಲಿಯ ಬೆನ್ನುಬಿದ್ದು ಪ್ರೀತಿಸುತ್ತಿದ್ದ ಅನಂದ್ ಕುಮಾರ್.. ಮಂಗಳವಾರ ಮಂಚನಬಲೆ ಗ್ರಾಮಕ್ಕೆ ತನ್ನ ಪಲ್ಸರ್‌ ಬೈಕ್‌ ನಲ್ಲಿ ಬಂದು ಯುವತಿ ವಾಸವಿದ್ದ ಸಂಬಂಧಿ ಮನೆ ಮುಂದೆಯೇ ಬಾ ನಮ್ಮ ಮನೆಗೆ ಹೋಗೋಣ ಅಂತ ಬಲವಂತ ಮಾಡಿದ್ದನಂತೆ.ನನ್ನನ್ನ ಮದುವೆ ಮಾಡಿಕೋ ಅಂತ ಒತ್ತಾಯಿಸಿದ್ದನಂತೆ.

ಆದ್ರೆ ಇದಕ್ಕೆ ವೈಶಾಲಿ ಹಾಗೂ ಅವರ ಸಂಬಂಧಿಕರು ವಿರೋಧ ಮಾಡಿದಾಗ ಮಾತಿಗೆ ಮಾತು ಬೆಳೆದು ಗಲಾಟೆಯಾಗಿ ಅನಂದ್ ಕುಮಾರ್ ಮನೆಯಲ್ಲಿ ಮಲಗಿದ್ದ ಯುವತಿ ವೈಶಾಲಿ ಮೇಲೆ ಟಾಯ್ಲೆಟ್ ಆಸಿಡ್ ಎರಚಿದ್ದಾನೆ. ಕೂಡಲೇ ಮನೆಯವರು ಆಕೆಯನ್ನ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಕರೆ ತಂದು ಚಿಕಿತ್ಸಗೆ ದಾಖಲಿಸಿದ್ದಾರೆ.

ಆದ್ರೆ ಅದೃಷ್ಟವಶಾತ್ ಯುವತಿ ಬಚಾವ್ ಆಗಿದ್ದಾಳೆ. ಅದ್ರೆ ಮಾವ ಅನಂದ್ ಕುಮಾರ್ ಪೆಟ್ರೋಲ್ ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿ ನನ್ನ ಸಾವಿಗೆ ಅತ್ತೆ, ಮಾವ, ಮಗಳೆ ಕಾರಣ ಎಂದು ಹೇಳಿದ್ದ.

ಮಾವ ಅನಂದ್ ಕುಮಾರ್ ಮಾವನ ಮಗಳ ವೈಶಾಲಿ ಯನ್ನು ಅತಿಯಾಗಿ ಪ್ರೀತಿಸಿದ್ದ.. ಮದುವೆ ಮಾಡಿಕೊಂಡ್ರೆ ವೈಶಾಲಿಯನ್ನೇ ಮದುವೆ ಆಗುವುದಾಗಿ ಹೇಳಿಕೊಂಡಿದ್ದ.. ಅದ್ರೆ ಯುವತಿ ಮಾತ್ರ ಮಾವನ ಪ್ರೀತಿಯು ನಿರಾಕರಿಸಿದ ಹಿನ್ನೆಲೆ ನೊಂದ ಅನಂದ್ ಕುಮಾರ್ ಬೆಂಕಿ ಹಚ್ಚಿಕೊಂಡು 80 ರಷ್ಟು ಬಹುತೇಕ ಬೆಂಕಿಯಿಂದ ಸುಟ್ಟು ಕುರುಕುಲಾಗಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆ ಪಾಲಾಗಿದ್ದ.. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೆ ದಾಖಲು ಮಾಡಿದ್ರು ಅದ್ರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

ಪ್ರೀತಿಯ ಮಾಯೆಯಲ್ಲಿ ಸಿಲುಕಿದ್ದ ಮಾವ ತನ್ನ ಅತ್ತೆ ಮಗಳನ್ನು ತನ್ನ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತಿದ್ದ, ಆದರೆ ಅತ್ತೆ ಮಗಳು ತನ್ನ ಪ್ರೀತಿಯನ್ನು ನಿರಾಕರಿಸಿದ ಕಾರಣ ಸಹಿಸಿಕೊಳ್ಳಲಾಗದೆ ಆಕೆಯನ್ನು ಕೊಂದು ತಾನು ಸಾಯುವ ತೀರ್ಮಾನಕ್ಕೆ ಬಂದಿದ್ದು ಕುರುಡು ಪ್ರೀತಿಯ ಬಲೆಗೆ ಬಿದ್ದ ಮಾವ ತನ್ನ ಪ್ರಾಣವನ್ನೇ ಕಳೆದುಕೊಂಡಿರೋದು ದುರಂತ.