ಉ.ಕ ಸುದ್ದಿಜಾಲ ಚಿಕ್ಕೋಡಿ :

ಕರ್ತವ್ಯ ನಿರತ ಪೋಲಿಸ್ ಪೇದೆ ಅಪಘಾತದಲ್ಲಿ ಸಾವು. ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಪೊಲೀಸ ಪೇದೆ ಮಂಜುನಾಥ್ ಸತ್ತಿಗೇರಿ (26) ಮೃತ ದುರ್ದೈವಿ ಆಗಿದ್ದಾರೆ.

ಮೂಲತಃ ಬಾಗಲಕೋಟ ಜಿಲ್ಲೆಯ ಮಹಾಲಿಂಗಪುರ ಹತ್ತಿರದ ಕೆಸರಗೊಪ್ಪ ಗ್ರಾಮದ ರಹಹವಾಸಿ. ಕಳೆದ 5 ವರ್ಷಗಳಿಂದ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮಂಜುನಾಥ್

ಕುಡಚಿಯಿಂದ ಬೈಕ್ ಮೇಲೆ ಬರುವಾಗ ಅಂಕಲಿ-ರಾಯಬಾಗ ರಸ್ತೆಯಲ್ಲಿ ಅಪಘಾತ. ಚಿಕ್ಕೋಡಿ ತಾಲೂಕಿನ ನಂದಿಕುರಳಿ ಕ್ರಾಸ್ ಹತ್ತಿರ ಎರಡು ಬೈಕುಗಳ ನಡುವೆ ನಡೆದ ಅಪಘಾತ.

ಅಪಘಾತದಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ ಪೋಲಿಸ್ ಪೇದೆ ಮಂಜುನಾಥ. ಆರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಮಂಜುನಾಥ. ಸ್ಥಳಕ್ಕೆ ಡೌಡಾಯಿಸಿದ ಪೋಲಿಸರಿಂದ ತನಿಖೆ.