ಉ.ಕ ಸುದ್ದಿಜಾಲ ಹುಕ್ಕೇರಿ :
ಮೊನ್ನೆ ನಡೆದ ಕತ್ತಿ ಕುಟುಂಬದ ಸಮಾವೇಶಕ್ಕೆ ಮರು ದಿನವೇ ಕೌಂಟರ್ ನೀಡಿದ ಸಚಿವ ಸತೀಶ ಜಾರಕಿಹೋಳಿ ಹುಕ್ಕೇರಿ ಮತಕ್ಷೇತ್ರದಲ್ಲಿ ಲಿಂಗಾಯತ ಟ್ರಂಪ್ ಕಾರ್ಡ ಉರುಳಿಸಿದ ಸಚಿವ ಸತೀಶ ಮರು ದಿನವೇ ಹುಕ್ಕೇರಿ ಮತಕ್ಷೇತ್ರದ ಪ್ರಸಿದ್ಧ ಲಿಂಗಾಯತ ಮಠಕ್ಕೆ ಭೇಟಿ ನೀಡಿದ್ದಾರೆ.
ನೀಡಸೋಶಿ ದುರದುಂಡೇಶ್ವರ ಮಠಕ್ಕೆ ಸಚಿವ ಸತೀಶ ಭೇಟಿ ಮಠದ ನಿಜಲಿಂಗೇಶ್ವರ ಶ್ರೀಗಳ ಜೊತೆಗೆ ಗೌಪ್ಯ ಸಭೆ ನಡೆಸಿದ ಸಚಿವ ಸತೀಶ ಸಭೆಯ ಬಳಿಕ ನಿಡಸೋಶಿ ಗ್ರಾಮದಲ್ಲಿ ಸಚಿವ ಹೇಳಿಕೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನಿಡಸೋಶಿ ಗ್ರಾಮ ನಿನ್ನೆಯಷ್ಟೆ ಹೊರಗಿನವರಿಗೆ ಆಡಳಿತ ನಡೆಸಲು ಬಿಡುವದಿಲ್ಲ ಎನ್ನುವ ರಮೇಶ ಕತ್ತಿ ಹೇಳಿಕೆ ವಿಚಾರ
ಸಮಯ ಬಂದಾಗ ಕತ್ತಿ ಹೇಳಿಕೆಗೆ ಉತ್ತರ ಕೊಡುತ್ತೇನೆ. ಜಿಲ್ಲೆಯಲ್ಲಿ ಜಾರಕಿಹೊಳಿ ಕುಟುಂಬದ ವಿರುದ್ಧ ಕನ್ನೇರಿ ಮಠದಲ್ಲಿ ಲಿಂಗಾಯತ ಮುಖಂಡರ ಸಭೆ ವಿಚಾರ. 20 ವರ್ಷದಿಂದ ನಮ್ಮ ವಿರುದ್ಧ ಸಭೆಗಳು ನಡೆಯುತ್ತಲೆ ಇವೆ. ಅವರ ಶಕ್ತಿ ಅವರು ಪ್ರದರ್ಶನ ನಮ್ಮ ಒಗ್ಗಟ್ಟು ನಮ್ಮ ಪ್ರದರ್ಶನ ಮಾಡುತ್ತೇವೆ.
ಇದು ರಾಜಕೀಯದಲ್ಲಿ ಸ್ವಾಭಾವಿಕ ಕನ್ನೇರಿ ಮಠದಲ್ಲಿನ ಸಭೆಯ ಬಗ್ಗೆ ನನಗೆ ಮಾಹಿತಿ ಇದೆ. ಅದು ಸಭೆಯಷ್ಟೇ ಪ್ರಾಯೋಗಿಕವಾಗಿ ಅದು ಜಾರಿಯಾಗಲ್ಲ.
ಮೋದಿ ಇರುವವರೆಗೆ ಮಾತ್ರ ಬಿಜೆಪಿ ಪಕ್ಷ ಎನ್ನುವ ಬಿಜೆಪಿ ಮುಖಂಡನ ಹೇಳಿಕೆ ವಿಚಾರ. ನಾವು ಕೂಡ ಅದನ್ನೇ ಹೇಳಿದ್ದೇವೆ ಮೋದಿ ಇರುವವರೆಗೆ ಬಿಜೆಪಿ ಎಂದು ಸಾಕಷ್ಟು ಬಾರಿ ಹೇಳಿದ್ದೇವೆ. ಮೋದಿ ಅವರದೇ ಆದ ವೈಯಕ್ತಿಕ ವೋಟ್ ಬ್ಯಾಂಕ್ ಇದೆ
ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘಕ್ಕೆ ಚುನಾವಣೆ ಮಾಡುವ ವಿಚಾರ ಇಲ್ಲ. ಮುಖಂಡರ ಜೊತೆಗೆ ಚರ್ಚೆ ಮಾಡುತ್ತೇವೆ. ಜನರಿಗೆ ಒಳ್ಳೆಯದು ಆಗುವದು ಮಾಡುತ್ತೇವೆ. ಪೋಸ್ ಕೊಡುವ ಅವಶ್ಯಕತೆ ನಮಗೆ ಇಲ್ಲ.
ಪೋಸ್ ಕೊಡುವ ಕಲೆ ನಮ್ಮಲಿಲ್ಲ. ಸಮಯ ಬಂದಾಗ ಹೇಳುತ್ತೇವೆ ಹುಕ್ಕೇರಿ ಮತಕ್ಷೇತ್ರದಲ್ಲಿ ಸಮಾವೇಶ ಮಾಡುವದಿಲ್ಲ ಸಮಾವೇಶದ ಮೇಲೆ ಭರವಸೆ ಇಲ್ಲ. 5 ಲಕ್ಷ ಜನರನ್ನ ಸೇರಿಸಿದ್ದೇವೆ,ನಿನ್ನೆ 2 ಸಾವಿರ ಜನ ಇದ್ದರು ಜನ ಕೂಡಿಸುವದು ನಮಗೆ ಹೊಸದೇನಲ್ಲ ಎಂದ ಜಾರಕಿಹೋಳಿ.
ಕತ್ತಿ ಕುಟುಂಬಕ್ಕೆ ಅರ್ಜಂಟ್ ಇದ್ದಷ್ಟು ನನಗೆ ಇಲ್ಲ ನಾನು ಆಯುರ್ವೇದಿಕ ಡಾಕ್ಟರ್ ಇದ್ದ ಹಾಗೆ ನಮ್ಮದು ಸ್ಲೋ ಇರುತ್ತೆ. ಶೀಘ್ರದಲ್ಲೇ ಚಿಕ್ಕೋಡಿ ಹಾಗೂ ಗೋಕಾಕ ಜಿಲ್ಲಾ ರಚನೆಗೆ ಸಿಎಂ ಬಳಿ ನಿಯೋಗ ಕರೆದೊಯುತ್ತವೆ ಎಂದರು.
VIDIO – ಹುಕ್ಕೇರಿ ಮತಕ್ಷೇತ್ರದಲ್ಲಿ ಜೋರಾದ ಕತ್ತಿ Vs ಜಾರಕಿಹೊಳಿ, ಈ ಬಗ್ಗೆ ಬೆಳಗಾವಿ ಉಸ್ತುವಾರಿ ಸಚಿವರ ಏನಂತ್ತಾರೆ?
