ಉ.ಕ ಸುದ್ದಿಜಾಲ ಹುಕ್ಕೇರಿ :
ಅಪ್ರಾಪ್ತ ಮತ್ತು ಮಾನಸಿಕ ಅಸ್ವಸತ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದ ಆರೋಪಿಯ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಲಯವು 30 ವರ್ಷಗಳ ಕಾರಾವಾಸ ಹಾಗೂ 10 ಸಾವಿರ ದಂಡ ವಿಧಿಶಿ ತೀರ್ಪು ನೀಡಿ ಆದೇಶಿಸಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸೊಲ್ಲಾಪುರ ಗ್ರಾಮದಲ್ಲಿ ಕಳೆದ ನಡೆದ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಬಗ್ಗೆ ಸಂಕೇಶ್ವರ ಪೋಲಿಸ ಠಾಣೆಯಲ್ಲಿ ಆರೋಪಿತನಾದ ಅಪ್ಪಾಸಾಹೇಬ ಬಾಳಗೌಡ ತೋಡಕರ @ಪಾಟೀಲ (42) ಸಾ : ದರ್ಗಾ ಗಲ್ಲಿ ಸೊಲ್ಲಾಪೂರ ತಾ : ಹುಕ್ಕೇರಿ ಇವನಿಗೆ ಪೊಕ್ಸಿ ಪಕರಣದಲ್ಲಿ 30 ವರ್ಷ ಕಾರಾವಾಸ ಹಾಗೂ ರೂ.10,000 ದಂಡ ವಿಧಿಸಿ ಬೆಳಗಾವಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸಿ. ಎಮ್. ಪುಷ್ಪಲತಾ, ಇವರು ಈ ತೀರ್ಪು ನೀಡಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎಲ್.ವಿ. ಪಾಟೀಲ ವಾದ ಮಂಡಿಸಿದರು.
ಪ್ರಕರಣದ ವಿವರ – ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸುಲ್ತಾನಪೂರ ಗ್ರಾಮದ 17 ನೇ ವರ್ಷ ವಯಸ್ಸಿನ ಅಪ್ರಾಪ್ತ ಮತ್ತು ಮಾನಸಿಕ ಅಸ್ವಸತ್ತ ಬಾಲಕಿಗೆ ಆರೋಪಿತ ಅಪ್ಪಾಸಾಹೇಬ ಈತ ಅಪ್ರಾಪ್ತಯನ್ನು ಪುಸಲಾಯಿಸಿ ಅತ್ಯಾಚಾರ ಮಾಡುವ ದುರುದ್ದೇಶದಿಂದಾ ದಿ. 01-09-2021 ರಂದು ತನ್ನ ದ್ವಿಚಕ್ರ ವಾಹನದಲ್ಲಿ ಸೊಲ್ಲಾಪೂರ ಗ್ರಾಮ ಹದ್ದಿಯ ಜಮೀನನಲ್ಲಿ ಕರೆದುಕೊಂಡು ಹೋಗಿ ಬಾಲಕಿಯ ಮೇಲೆ ಜಬರಿ ಸಂಭೋಗ ಮಾಡಿದ ಅಪರಾಧದ ಮೇರೆಗೆ ಪ್ರಕರಣ ದಾಖಲಾಗಿತ್ತು.
ಸದರಿ ಈ ಪ್ರಕರಣದ ತನಿಖೆಯನ್ನು ಮಾಡಿ ಅಂದಿನ ಹುಕ್ಕೇರಿ ವೃತ್ತದ ಸಿಪಿಐ ರಮೇಶ ಬಿ ಛಾಯಾಗೋಳ ಅವರು ಆರೋಪಿತನ ಮೇಲೆ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.
ಈ ಪ್ರಕರಣವನ್ನು ಆಲಿಸಿದ ಮಾನ್ಯ ನ್ಯಾಯಾಲಯವು ಆರೋಪಿ ಅಪ್ಪಾಸಾಹೇಬ ಈತನ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 30 ವರ್ಷಗಳ ಕಾರಾವಾಸ ಮತ್ತು 10 ಸಾವಿರ ದಂಡ ವಿಧಿಸಿ ಆದೇಶ ಮಾಡಿದೆ.
ಅಪ್ರಾಪ್ತ ಮತ್ತು ಮಾನಸಿಕ ಅಸ್ವಸತ್ತ ಬಾಲಕಿಯ ಮೇಲೆ ಅತ್ಯಾಚಾರ – 30 ವರ್ಷ ಶಿಕ್ಷೆ
