ಉ.ಕ ಸುದ್ದಿಜಾಲ ಹುಕ್ಕೇರಿ :
ಬೆಳಗಾವಿಯ ರಾಜಕೀಯ ಅಷ್ಟು ಬೇಗ ಯಾರಿಗೂ ಹತ್ತಲ್ಲ ಯಾರು ಯಾರ ಕಡೆ ಒಲೆಯತ್ತಾರೆ, ಯಾರಿಗೆ ಒದೆಯುತ್ತಾರೆ ಎನ್ನುವುದು ಅಷ್ಟು ಸುಲಭವಾಗಿ ತಿಳಿಯಲ್ಲ ಅದಕ್ಕೆ ತಾಜಾ ಉದಾಹರಣೆ ಮತ್ತೊಂದು ನಡೆದಿದೆ.
ಹೌದು ಕೆಲ ದಿನಗಳ ಹಿಂದೆಯಷ್ಟೆ ಜೊಲ್ಲೆ ಬಿಟ್ಟು ಕತ್ತಿ ಹಾಗೂ ಎ ಬಿ ಪಾಟೀಲ ಕೈ ಹಿಡಿದಿದ್ದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹೀರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕರು ಕತ್ತಿ ಹಾಗೂ ಎ ಬಿ ಪಾಟೀಲ ಕೈ ಬಿಟ್ಟು ಮತ್ತೆ ಅಣ್ಣಾಸಾಹೇಬ ಜೊಲ್ಲೆ ಪರ ಸೇರಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೆ ಜೊಲ್ಲೆ ಬಿಟ್ಟು ಕತ್ತಿ ಕುಟುಂಬದ ಕೈ ಹಿಡಿದಿದ್ದ ನಿರ್ದೇಶಕರು ಮಾಜಿ ಸಂಸದ ರಮೇಶ ಕತ್ತಿ ಹಾಗೂ ಮಾಜಿ ಸಚಿವ ಎ ಬಿ ಪಾಟೀಲ ಸಹಕಾರ ನೀಡದ ಕಾರಣ ಹಾಗೂ ಕಾರ್ಖಾನೆ ಆರಂಭಕ್ಕೆ ಹಣ ನೀಡದ ಕಾರಣ ನಿರ್ದೇಶಕರು ರಮೇಶ ಕತ್ತಿ ಹಾಗೂ ಎ ಬಿ ಪಾಟೀಲ ಗೆ ಕೈ ಕೊಟ್ಟಿದ್ದಾರೆ. ಕಾರ್ಖಾನೆ ಆರಂಭಕ್ಕೆ ಶತ ಪ್ರಯತ್ನ ಪಡುತ್ತಿರುವ ನಿರ್ದೇಶಕರಿಗೆ ಜೊಲ್ಲೆ ದೋಸ್ತಿ ಅನಿವಾರ್ಯವಾಗಿದೆ.
ಮತ್ತೆ ಜೊಲ್ಲೆ ಕಡೆ ವಾಲಿದ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ ಮತ್ತೆ ಪಲ್ಟಿ ಹೊಡೆದ ಕಾರ್ಖಾನೆ ನಿರ್ದೆಶಕರು ಕತ್ತಿ ಕುಟುಂಬವನ್ನು ಬಿಟ್ಟು ಜೊಲ್ಲೆ ಪರ ವಾಲಿದ್ದ ನಿರ್ದೆಶಕರು ಆದರೆ ಮತ್ತೆ ಮರಳಿ ಕತ್ತಿ-ಎಬಿ ಪಾಟೀಲ್ ನೇತೃತ್ವದಲ್ಲಿ ಮರಳಿದ್ದ ನಿರ್ದೆಶಕರು ಈಗ ಮತ್ತೆ ಅಣ್ಣಾಸಹೇಬ್ ಜೊಲ್ಲೆ ಪರ ನಿಂತು ಜೊಲ್ಲೆಗೆ ಅಧಿಕಾರ ನೀಡಿದ ನಿರ್ದೆಶಕರು
ಹುಕ್ಕೇರಿ ಮತಕ್ಷೇತ್ರದಲ್ಲಿ ಕಳೆದ ಒಂದು ತಿಂಗಳುಗಳಿಂದ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಇಂದು ಜೊಲ್ಲೆ ನಿವಾಸದಲ್ಲಿ ನಿರ್ಧೆಶಕರ ಪ್ರತಿಕ್ರಿಯೆ ನೀಡಿದ್ದಾರೆ.
ಏನಾಗತ್ತಿದೆ ಹುಕ್ಕೇರಿಯ ರಾಜಕೀಯ : ಸಂಕೇಶ್ವರ ಪಟ್ಟಣದಲ್ಲಿರುವ ಹಿರಣ್ಯಕೇಶಿ ಸಕ್ಕರೆ ಸಹಕಾರಿ ಕಾರ್ಖಾನೆ ಜೊಲ್ಲೆ ತಕ್ಕೆಗೆ
