ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ತುಂಬಿ ಹರಿಯುತ್ತಿರುವ ಕುಶಾವತಿ ನದಿ. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಕುಶಾವತಿ ನದಿ.

ಕಳೆದ ವರ್ಷವೂ ಮಳೆಯಾಗಿ ಹರಿದಿದ್ದ ಕುಶಾವತಿ ನದಿ. ಕಳೆದ ಮೂರು ದಿನಗಳ ನಿರಂತರ ಮಳೆಯಿಂದ ಮತ್ತೆ ಕೋಡಿ ಹೋಗುತ್ತಿರುವ ಹಳ್ಳಕೊಳ್ಳಗಳು. ಚಿಂತಾಮಣಿ ತಾಲ್ಲೂಕಿನ ಕೆ.ರಾಗುಟ್ಟಹಳ್ಳಿ, ಕೋಟಗಲ್, ಮಿಂಡಿಗಲ್ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಉತ್ತಮ ಮಳೆಯಿಂದಾಗಿ ಮತ್ತೊಮ್ಮೆ ಉಕ್ಕಿ ಹರಿದ ಕುಶಾವತಿ ನದಿ. ಬಯಲು ಸೀಮೆಯ ರೈತರಲ್ಲಿ ಇಮ್ಮಡಿಯಾದ ಖುಷಿ. ಉತ್ತಮ ಮಳೆಯಿಂದ ಅಂತರ್ಜಲ ಮಟ್ಟ ಏರಿಕೆ.