ಉ.ಕ ಸುದ್ದಿಜಾಲ ರಾಯಬಾಗ :
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಅಲಖನೂರ ಗ್ರಾಮದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವೇಗವಾಗಿ ಬರ್ತಿದ್ದ ಎರಡು ವಾಹನಗಳ ನಡುವೆ ಡಿಕ್ಕಿ ಸಂಭವಿಸಿದೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಲಾರಿ-ಬೈಕ್ ನಡುವೆ ಮುಖಾಮುಖಿ ಡಿಕ್ಕಿ
ಅಲಖನೂರ ಗ್ರಾಮದ ಜಮಖಂಡಿ-ಮಿರಜ್ ರಾಜ್ಯ ಹೆದ್ದಾರಿಯಲ್ಲಿ ಲಾರಿ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಈ ಭೀಕರ ಅಪಘಾತದಲ್ಲಿ ತಂದೆ-ತಾಯಿ ಹಾಗೂ ಮಗಳು ದಾರುಣವಾಗಿ ಸಾವನ್ನಪ್ಪಿದ್ದಾರೆ.
ತಂದೆ-ತಾಯಿ, ಮಗಳು ಸಾವು
ಗಿರೇಪ್ಪಾ ಕುದ್ರಾಳಿ (38), ಪತ್ನಿ ಮಂಜುಳಾ (28) ಹಾಗೂ ಮಗಳು ಆರಾಧ್ಯ (7) ಮೃತ ದುರ್ದೈವಿಗಳಾಗಿದ್ದಾರೆ. ಮೃತರು ಮಹಾರಾಷ್ಟ್ರದ ಮಿರಜ್ ಮೂಲದವರು ಎನ್ನಲಾಗ್ತಿದೆ. ಗಿರೇಪ್ಪಾ ಕುದ್ರಾಳಿ ಅವರು ಬೈಕ್ ನಲ್ಲಿಯೇ ಮಿರಜ್ ನಿಂದ ಕುಟುಂಬ ಸಮೇತ ಜಮಖಂಡಿಗೆ ಹೋಗುತ್ತಿದ್ದರು ಎಂದು ತಿಳಿದು ಬಂದಿದೆ.
ಮಹಾರಾಷ್ಟ್ರದ್ ಮಿರಜದಿಂದ ಜಮಖಂಡಿಗೆ ಹೋಗುತ್ತಿದ್ ಕುಟುಂಬಸ್ಥರು. ಹಾರೂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಅಪಘಾತ ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ
ಟ್ರಕ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಬೈಕ್ ಮೇಲಿದ್ದ 3 ಜನರ ಸಾವು


