ಉ.ಕ ಸುದ್ದಿಜಾಲ ಚಿಕ್ಕೋಡಿ :

ದ್ವಿತೀಯ ಪಿಯು ಪರೀಕ್ಷೆಗೆ ಹೊರಟಿದ್ದ ವಿದ್ಯಾರ್ಥಿನಿಗೆ ಹೃದಯಾಘಾತ‌. ಪಿಯು ಪರೀಕ್ಷೆಯನ್ನು ಬರೆಯುವದನ್ನು ಬಿಟ್ಟು ಜೀವನದ ಪರೀಕ್ಷೆಯನ್ನೆ ಮುಗಿಸಿದ ವಿದ್ಯಾರ್ಥಿನಿ. ಹೃದಯಾಘಾತದಿಂದ ದ್ವಿತೀಯ ಪಿಯು ವಿದ್ಯಾರ್ಥಿನಿ ಸಾವು.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬಂಬಲವಾಡ ಗ್ರಾಮದಲ್ಲಿ ಘಟನೆ. ಬಂಬಲವಾಡ ಗ್ರಾಮದ ಭೂಮಿಕಾ ಮಾಳಂಗಿ (17) ಹೃದಯಾಘಾತದಿಂದ ಸಾವು. ಇಂದು PU ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ವಿದ್ಯಾರ್ಥಿನಿ. ಸ್ನಾನ ಮುಗಿಸಿಕೊಂಡು ಮನೆಯಿಂದ ಹೊರ ಬರುತ್ತಿದ್ದ ವೇಳೆಯೇ ಹೃದಯಾಘಾತ. ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದ ಪೋಷಕರು.

ಮಾರ್ಗ ಮಧ್ಯೆಯೇ ಅಸುನೀಗಿದ ಪಿಯು ವಿದ್ಯಾರ್ಥಿನಿ. ಈ ಘಟನೆಯಿಂದ ಗ್ರಾಮದಲ್ಲಿ ಶೋಕಮಯ ವಾತಾವರಣ ನಿರ್ಮಾಣ