ಉ.ಕ ಸುದ್ದಿಜಾಲ ಸವದತ್ತಿ :

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ಘಟನೆ. ಜನತಾ ಕಾಲೋನಿ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಘಟನೆ. ಶಾಲಾ ಆವರಣದಲ್ಲಿರುವ ವಾಟರ್ ಟ್ಯಾಂಕ್‌ಗೆ ದುಷ್ಕರ್ಮಿಗಳಿಂದ ಕೀಟನಾಶಕ ಬೇರಿಸಿರೋ ಆರೋಪ ಕೇಳಿ ಬಂದಿದೆ.

ಕೀಟನಾಶಕ ಮಿಶ್ರಿತ ನೀರು ಸೇವನೆ ಮಾಡ್ತಿದ್ದಂತೆ ಮಕ್ಕಳ‌ ಆರೋಗ್ಯದಲ್ಲಿ ಏರುಪೇರು. 12ಜನ ಮಕ್ಕಳಿಗೆ ತಲೆಸುತ್ತು, ವಾಂತಿ ಹಿನ್ನೆಲೆ ಸವದತ್ತಿ ತಾಲೂಕಾ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ.

ಸವದತ್ತಿ ಆಸ್ಪತ್ರೆಗೆ ಬೆಳಗಾವಿ ಡಿಎಚ್ಒ ಈಶ್ವರ್ ಗಡಾದ್,‌ ಡಿಡಿಪಿಐ ಲೀಲಾವತಿ ಹಿರೇಮಠ ಭೇಟಿ. ಮಕ್ಕಳ ಆರೋಗ್ಯ ವಿಚಾರಿಸಿದ ಡಿಎಚ್ಒ ಡಾ.ಈಶ್ವರ ಗಡಾದ್. ಮಕ್ಕಳು ಆರೋಗ್ಯದಲ್ಲಿ ಸದ್ಯ ಚೇತರಿಕೆ ಕಂಡು ಬಂದಿದೆ.

ಕೀಟನಾಶಕ ಬೇರಸಿದ್ದರ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ ಅಂತಾ ಡಿಎಚ್ಒ ಮಾಹಿತಿ. ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.