ಉ.ಕ ಸುದ್ದಿಜಾಲ ಅಥಣಿ :
ಪೋಲಿ ಪುಂಡರ ಯುವಕರ ಗ್ಯಾಂಗ್ ಒಂದು ರಾತ್ರಿ ಹೊತ್ತು ಗ್ರಾಮಕ್ಕೆ ನೂಗ್ಗಿ ಹಲ್ಲೆ ಮಾಡಿರುವ ಘಟನೆ ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ ನಡೆದಿದೆ.
ಶುಕ್ರವಾರ ಸಾಯಂಕಾಲ ಸುಮಾರು 15 ಜನ ಕಿಡಿಗೇಡಿಗಳ ಗ್ಯಾಂಗ ಗ್ರಾಮಕ್ಕೆ ಬಂದು ಗಲಾಟೆ ಮಾಡಿದ್ದಾರೆ. ಕೈಯಲ್ಲಿ ಕೋಲು, ಕಲ್ಲು, ಎಲೆಕ್ಟ್ರಿಕ್ ಲೈಟರ್,ಹಿಡಿದು ಪುಂಡಾಟ ಮೆರೆದಿದ್ದಾರೆ. ಗಲಾಟೆಯಲ್ಲಿ ತಾಂವಶಿ ಗ್ರಾಮದ ಅಪ್ಪಾಸಾಬ ಸಿದ್ರಾಮ್ ಬಿಳ್ಳೂರ ಇತನ ತಲೆಗೆ ಗಂಭೀರ ಗಾಯವಾಗಿದೆ.
ನಾಗರಾಜ್ ಬೆಳ್ಳಂಕಿ, ಅಶೋಕ್ ಕೆಂಚಗೌಡರ್, ಮಲ್ಲಿಕಾರ್ಜುನ್ ಲಖಗೌಡರ ಇತರಿಗೆ ಪೆಟ್ಟಾಗಿದೆ. ಗಾಯಳುಗಳನ್ನು ಅಥಣಿ ಸಾರ್ವಜನಿಕ ಆಸ್ಪತ್ರೆಗೆ ರವಾಣಿಸಿದ್ದಾರೆ. ಕಿಡಿಗೇಡಿಗಳು ತಾಂವಶಿ ಗ್ರಾಮದಲ್ಲಿ ಅಶಾಂತಿ ಉಂಟು ಮಾಡಿದ್ದು, ಗ್ರಾಮದಲ್ಲಿ ಅಡ್ಡ ದಿಡ್ಡಿಯಾಗಿ ಬೈಕ್ ಸುತ್ತಾಟ ಶಾಲಾ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುವುದಲ್ಲದೆ ಅಗಂಡಿ ವ್ಯಾಪಾರಸ್ಥರ ಮೇಲೆ ಗುಂಡಾವರ್ತನೆ ತೋರುತ್ತಿರುವ ಕುರಿತು ಗ್ರಾಮಸ್ಥರು ಆರೋಪ ಮಾಡಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸ್ ತುರ್ತು ಸೇವೆ 112 ಸಿಬ್ಬಂದಿ ಬೆಟ್ಟಿ ನೀಡಿ ಪರಿಶೀಲಿಸಿದೆ. ಈ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಗಡಿಯಲ್ಲಿ ಗಲಾಟೆ ; ಗ್ರಾಮಕ್ಕೆ ನುಗ್ಗಿ ಮಾರಾಣಾಂತಿಕ ಹಲ್ಲೆ ! FIR ದಾಖಲು..
