ಉ.ಕ ಸುದ್ದಿಜಾಲ ಅಥಣಿ :
ಇಂತಹ ಡೋಂಗಿ ರಾಜಕಾರಣ ಮಾಡೋದಲ್ಲ, SIT ತನಿಖೆ ವಿಚಾರದಲ್ಲಿ ಬಿಜೆಪಿ ನಾಯಕರ ಕಾಲೆಳೆದ ಅಥಣಿ ಶಾಸಕ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಧರ್ಮಸ್ಥಳ ವಿಚಾರದಲ್ಲಿ ಬಿಜೆಪಿ ಆಡಳಿತ ಪಕ್ಷದ ವಿರುದ್ಧ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಮೊದಲ ಹಂತದಲ್ಲಿ SIT ತನಿಖೆಗೆ ಸ್ವಾಗತ ಮಾಡಿದ್ದೂ ಇವರೇ ಈಗ ಆಡಳಿತ ಸರ್ಕಾರದ ವಿರುದ್ಧ ಮಾತನಾಡುವವರೂ ಇವರೇ..
ಬಿಜೆಪಿಯವರಿಗೆ ಧಾರ್ಮಿಕ ಕ್ಷೇತ್ರದ ಬಗ್ಗೆ ಭಯ ಭಕ್ತಿ ಇಲ್ಲಾ. ಅಂದು SIT ವಿಚಾರದಲ್ಲಿ ಸರ್ಕಾರ ತೆಗೆದುಕೊಂಡ ನಿರ್ಧಾರಕ್ಕೆ ಅಸ್ತು ಅಂದ ಬಿಜೆಪಿ ಈಗ ಉಲ್ಟಾ ಧಾರ್ಮಿಕ ಕ್ಷೇತ್ರದ ವಿಚಾರದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ.
ಅನಾಮಿಕ ಹೇಳಿಕೆ ಆಧರಿಸಿ ಸಂಪೂರ್ಣ ತನಿಖೆ ಶುರು ಮಡಿದ SIT ಗೆ ಸರ್ಕಾರ ಸಹಕಾರ ನೀಡಿದೆ. ಅಲ್ಲಿ ಏನು ಸಿಗದೇ ಇದ್ದಾಗ ಬಿಜೆಪಿ ಸುಖಾ ಸುಮ್ಮನೆ ನಮ್ಮ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದೆ ಎಂದು ಬಿಜೆಪಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಸವದಿ.
SIT ತನಿಖೆ ವಿಚಾರದಲ್ಲಿ ಬಿಜೆಪಿ ನಾಯಕರ ಕಾಲೆಳೆದ ಲಕ್ಷ್ಮಣ ಸವದಿ