ಉ.ಕ ಸುದ್ದಿಜಾಲ ವಿಜಯಪೂರ :

ದ್ರಾಕ್ಷಿ ಬೆಳೆಗಾರರ ಜಿಲ್ಲೆಯಾದ ವಿಜಯಪುರದಲ್ಲಿ ನಕಲಿ ಕೀಟನಾಶಕ ತಯಾರಿಕಾ ಘಟಕದ ಮೇಲೆ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ 1ಕೋಟಿ 36 ಲಕ್ಷ ಮೌಲ್ಯದ ನಕಲಿ ಕೀಟನಾಶಕ ಜಪ್ತಿ ಮಾಡಿದ್ದಾರೆ..

ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಕೊಂಡಗುಳಿ ಗ್ರಾಮದ ನಿವಾಸಿ ವಿದ್ಯಾಧರ ಮಲ್ಲಾಬಾದ್‌ ನಕಲಿ ಕೀಟನಾಶಕ ತಯಾರಿಕೆ ಮಾಡ್ತಿದ್ದರು. ವಿಜಯಪುರ ನಗರದ ಹೊರವಲಯದ ಇಂಡ್ಸ್ಟ್ರಿಯಲ್‌ ಏರಿಯಾದಲ್ಲಿ ಕ್ರೀಟನಾಶಕ ತಯಾರಿಕಾ ಘಟಕವಿತ್ತು.

ಆದ್ರೆ ಅಸಲಿ ಕ್ರಿಮಿನಾಶಕ ಬ್ರಾಂಡ್‌ ಹೋಲುವ ನಕಲಿ ಕ್ರಿಮಿನಾಶಕ ತಯಾರಿಕೆ ಮಾಡ್ತಿದ್ದರು. ರಾಜಸ್ತಾನ ಮೂಲದ ಲೈಫ್‌ ಆಗ್ರೋ ಕೀಟನಾಶಕ, ಕಳೆನಾಶಕ ಕಂಪನಿಯ ಸೇಮ್‌ ಟು ಸೇಮ್‌ ಬಾಟಲ್‌, ಸ್ಟಿಕ್ಕರ್‌, ಬ್ರಾಂಡ ಹೆಸರು ಸಹಿತವಾಗಿ ದುರ್ಬಳಕೆ ಮಾಡಿಕೊಂಡು ನಕಲಿ ಕೀಟನಾಶಕ ರೆಡಿ ಮಾಡ್ತಿದ್ದ. ಈ ವಿಚಾರ ತಿಳಿದ ಲೈಪ ಆಗ್ರೋ ಕಂಪನಿ ಅಧಿಕಾರಿಗಳು ಎಪಿಎಂಸಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಇನ್ನು ಪೊಲೀಸ್‌ ಇಲಾಖೆ ಹಾಗೂ ಕೃಷಿ ಇಲಾಖೆಯ ವಿಚಕ್ಷಕ ದಳ ಜಂಟಿಯಾಗಿ ನಕಲಿ ಕಿಟನಾಶಕ ಘಟಕದ ಮೇಲೆ ದಾಳಿ ನಡೆಸಿದ್ದರು. ವಿದ್ಯಾಧರ ಮಲ್ಲಾಬಾದ್‌ ತಯಾರು ಮಾಡ್ತಿದ್ದ ನಕಲಿ ಕೀಟನಾಶಕವನ್ನ ಕಲಬುರ್ಗಿ, ಯಾದಗಿರಿ ಭಾಗದಲ್ಲಿ ಮಾರಾಟ ಮಾಡ್ತಿದ್ದನಂತೆ. ಅಲ್ಲಿ ಲೈಪ್‌ಆಗ್ರೋ ಕಂಪನಿ ಅಧಿಕಾರಿಗಳು ಮಾರ್ಕೆಟಿಂಗ್‌ ಗಾಗಿ ಓಡಾಡುವಾಗ ಈ ವಿಚಾರ ಬಯಲಿಗೆ ಬಂದಿದೆ. ತಮ್ಮದೆ ಬ್ರಾಂಡ್‌ನ ನಕಲಿ ಕೀಟನಾಶಕ ಎಲ್ಲಿಂದ ಸಪ್ಲೈ ಆಗ್ತಿದೆ ಅನ್ನೋದರ ಪರಿಶೀಲನೆ ನಡೆಸಿದಾಗ ವಿದ್ಯಾಧರ ಮಲ್ಲಾಬಾದ್‌ ಕಳ್ಳಾಟ ಬಯಲಾಗಿದೆ.

ಇನ್ನೊಂದು ಶಾಕಿಂಗ್‌ ವಿಚಾರ ಅಂದ್ರೆ ಇದೆ ವಿದ್ಯಾಧರ ಮಲ್ಲಾಬಾದ್‌ ಈ ಹಿಂದೆ ಲೈಫ್‌ಆಗ್ರೋ ಕಂಪನಿಯಲ್ಲೆ ಕೆಲಸ ಮಾಡ್ತಿದ್ದನಂತೆ. ಕೆಲ ತಿಂಗಳ ಹಿಂದೆ ಅಲ್ಲಿಂದ ಕೆಲಸ ಬಿಟ್ಟು ಅನ್ನ ತಿಂದ ಕಂಪನಿಗೆ ದ್ರೋಹ ಬಗೆಯುವ ಕೆಲಸ ಮಾಡಲು ಹೋಗಿ ಈಗ ಲಾಕ್‌ ಆಗಿದ್ದಾನೆ.

ದಾಳಿ ವೇಳೆ 1 ಕೋಟಿ 36 ಲಕ್ಷ ಮೌಲ್ಯದ ನಕಲಿ ಕೀಟನಾಶಕ ತಯಾರಿಕಾ ಮಶೀನ್‌ಗಳು, ನಕಲಿ ಕೀಟನಾಶಕ ಲಿಕ್ವಿಡ್‌, ನಕಲಿ ಬಾಟಲ್‌, ಬ್ರಾಂಡಿಂಗ್‌ ಸ್ಟಿಕ್ಕರ್‌ ಗಳು ಪತ್ತೆಯಾಗಿವೆ.

ಇನ್ನು ಕೆಲ ಬಾಟಲ್‌ ಗಳಲ್ಲಿ ಬರೀ ನೀರು ಕೆಮಿಕಲ್‌ ಹಾಕಿಯೂ ಅಸಲಿ ಕ್ರಿಮಿನಾಶಕ ಎಂದು ಮಾರಾಟ ಮಾಡಿದ್ದಾನೆ ಎನ್ನಲಾಗ್ತಿದ್ದು ಆ ಬಗ್ಗೆಯೂ ತನಿಖೆ ನಡೆಯುತ್ತಿದೆ. ವಶಪಡಿಸಿಕೊಂಡ ನಕಲಿ ಕೀಟನಾಶಕ ಸ್ಯಾಂಪಲ್ ಪರೀಕ್ಷೆಗಾಗಿ ಕಲಬುರ್ಗಿ ಲ್ಯಾಬ್ ಗೆ ಕಳುಹಿಸಿದ್ದಾರೆ..