ಉ.ಕ ಸುದ್ದಿಜಾಲ ಹಾರೂಗೇರಿ :
ಕುಡಚಿ ಮಾಜಿ ಶಾಸಕ ಪಿ.ರಾಜೀವ ನೇತೃತ್ವದಲ್ಲಿ ಹಾರುಗೇರಿ ಪಿಎಸ್‌ಐ ವಿರುದ್ಧ ಪ್ರತಿಭಟನೆ ಹಿನ್ನೆಲೆ ಹಾರುಗೇರಿಯಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ, ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪಿ.ರಾಜೀವ್ ಈ ಹಿಂದೆ ಪೊಲೀಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಪೊಲೀಸ್ ಅಧಿಕಾರಿಯ ಇತಿಮಿತಿಗಳ ಬಗ್ಗೆ ಅವರಿಗೆ ಚೆನ್ನಾಗಿಯೇ ಅರಿವಿದೆ.
ಹಾರುಗೇರಿ ಪಿಎಸ್‌ಐ ಅವರಿಂದ ಏನಾದ್ರೂ ಅನ್ಯಾಯವಾಗಿದ್ರೆ ಅದರ ಕುರಿತಂತೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಅವರ ಮೇಲೆ ಕಾನುನು ಕ್ರಮ ಜರುಗುಸಬಹುದಾಗಿತ್ತು. ಆದರೆ ಪಿ ರಾಜೀವ್ ಪೊಲೀಸ್‌ರ ವಿರುದ್ಧದ ಪ್ರತಿಭಟನೆಗೆ ಸಾರ್ವಜನಿಕರಿಗೆ ಕರೆ ನೀಡಿದ್ರು. ಪ್ರತಿಭಟನೆಯಲ್ಲಿ ನೂರಕ್ಕಿಂತ ಕಡಿಮೆ ಜನ ಭಾಗಿಯಾಗಿದ್ರು.
ಜನ ಸೇರುತ್ತಿಲ್ಲ ಎಂಬ ಕಾರಣಕ್ಕೆ 200 ರೂಪಾಯಿ ಕೊಟ್ಟು ಮಹಿಳೆಯರನ್ನು ಕರೆ ತಂದಿದ್ದಾರೆಂದು ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಆರೋಪಿಸಿದ್ರು. ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿ ಉನ್ನತ ಸ್ಥಾನಕ್ಕೇರಿರುವ ಪಿ.ರಾಜೀವ್ ಪೊಲೀಸ್ ಇಲಾಖೆ ವಿರುದ್ದವೇ ತಿರುಗಿಬಿದ್ದಿರುವುದು ದುರ್ದೈವದ ಸಂಗತಿ. ಈ ಹಿಂದೆ ಚುನಾವಣೆ ಸಂದರ್ಭದಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚುವುದಾಗಿ ಹೇಳಿಕೆ ನೀಡಿದ್ರು.
ಇಂತಹ ಹೇಳಿಕೆ ನೀಡುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ರು. ಕುಡಚಿ ಕ್ಷೇತ್ರದ ಜನತೆ ಬಹಳ ಮುಗ್ಧರಿದ್ದಾರೆ. ಜನತೆಯ ಮುಗ್ದತೆಯನ್ನು ಪಿ.ರಾಜೀವ್ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದರು.
ಪಿ.ರಾಜೀವ್ ಕುಡಚಿ ಶಾಸಕರಾಗಿದ್ದ ಸಂದರ್ಭದಲ್ಲಿ ಅಧಿಕಾರದ ದುರುಪಯೋಗದ ಕುರಿತು ಮಹೇಂದ್ರ ತಮ್ಮಣ್ಣವರ ಉದಾಹರಣೆಗಳ ಸಮೇತ ಸ್ಪಷ್ಟನೆ ನೀಡಿದ್ರು. ಇನ್ನು ಕಳೆದ ಎರಡುವರೆ ವರ್ಷಗಳಿಂದ ಪಿ. ರಾಜೀವ ಬಳಿ ಅಧಿಕಾರ ಇಲ್ಲದೇ ಇರುವುದರಿಂದ ಪಿ ರಾಜೀವ್ ಅವರು ಮಾನಸಿಕ ಸ್ಥೀಮಿತ ಕಳೆದುಕೊಂಡಿದ್ದಾರೆ. ಕೂಡಲೇ ಪಿ.ರಾಜೀವ್ ಆರೋಗ್ಯದ ಕಡೆ ಗಮನ ನೀಡಬೇಕೆಂದು ಸಲಹೆ ನೀಡಿದ್ರು.
ಇನ್ನು ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಅವರಿಗೆ ಪೊಲೀಸ್ರು ಕಮೀಷನ್ ನೀಡುತ್ತಾರೆ ಎನ್ನುವ ಆರೋಪಕ್ಕೆ ಪ್ರತಿಕ್ರಿಯಿದ ಅವರು, ಇದೆಲ್ಲ ಸತ್ಯಕ್ಕೆ ದೂರವಾದ ಅರೋಪ. ಅಧಿಕಾರ ಇಲ್ಲದೇ ಇರುವುದರಿಂದ ಹೀಗೆಲ್ಲ ವರ್ತನೆ ಮಾಡ್ತಿದ್ದಾರೆ ಎಂದರು.
ಪಿ.ರಾಜೀವ ಆರೋಪಕ್ಕೆ ಶಾಸಕ ಮಹೇಂದ್ರ ತಮ್ಮಣ್ಣವರ ಸ್ಪಷ್ಟನೆ – ಆರೋಗ್ಯದ ಕಡೆ ಗಮನ ನೀಡಬೇಕೆಂದು ಸಲಹೆ ನೀಡಿದ ತಮ್ಮನವರ
