ಉ.ಕ ಸುದ್ದಿಜಾಲ ಬೆಳಗಾವಿ :
ಮೊಬೈಲ್ ನಲ್ಲಿ ವಿಚಿತ್ರವಾಗಿ ಡೆತ್ ನೋಟ್ ಬರೆದು ಅರ್ಚಕರ ಮಗ ಸಾವು. ಬೆಳಗಾವಿಯ ಕಪಿಲೇಶ್ವರ ರೋಡ್ ನಲ್ಲಿರುವ ಮನೆಯಲ್ಲಿ ನೇಣಿಗೆ ಶರಣು. ಸಿದ್ದಾಂತ ಪೂಜಾರಿ(27) ಆತ್ಮಹತ್ಯೆ ಮಾಡಿಕೊಂಡ ಯುವಕ.
ಮೇಲೆ ಹೋದಾಗ ದೇವರು ಸಿಕ್ರೇ ತನಗೆ ಕಿರುಕುಳ ಕೊಟ್ಟವರನ್ನ ಹೊಡೆಯಲು ಹಚ್ಚುತ್ತೇನೆ. ದೇವರ ಕಡೆಯಿಂದ ಅವರಿಗೆ ಹೊಡೆಸುತ್ತೇನೆ. ಅಜ್ಜಿ ಸತ್ತಾಗ ಮಟನ್ ಮಾಡಿದ್ರೀ ಈಗ ನನ್ನ ತಿಥಿ ವೇಳೆ ಮಟನ್ ಮಾಡಬೇಡಿ. ಅದನ್ನ ಬಿಟ್ಟು ಏನೂ ಬೇಕಾದ್ರೂ ತಿನ್ನಲು ಮಾಡಿ.
ಯಾರು ಅಳುವುದು ಬೇಡ ನೀವು ಅತ್ರೆ ನನ್ನ ಆತ್ಮಹತ್ಯೆ ತ್ರಾಸ ಆಗುತ್ತೆ. ನಾನು ಹುಡುಗಿಗಾಗಿ ಸಾಯುತ್ತಿಲ್ಲ ಅದ್ಧೂರಿ ಜೀವನ ಮಾಡಲು ಆಗದೆ ಸಾಯುತ್ತಿದ್ದೇನೆ. ಗಣಪತಿ ಹಬ್ಬದ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತು.
ಆದ್ರೇ ಜೋರಾಗಿ ಗಣಪತಿ ಹಬ್ಬ ಮಾಡಿ ಸಾಯಬೇಕು ಅಂತಾ ಮುಂದೂಡಿದ್ದೆ. ತಾಯಿಗೆ ತೊಂದರೆ ಕೊಡದಂತೆ ತಂದೆಗೆ ಹೇಳಿ ಕಪಿಲೇಶ್ವರ ದೇವಸ್ಥಾನದಲ್ಲಿ ಅರ್ಚಕನಾಗಿ ಕೆಲಸ ಮಾಡ್ತಿದೆ. ಮೂರು ವರ್ಷದ ಹಿಂದೆ ರೇಪ್ ಕೇಸ್ ಹಾಕಿ ದೇವಸ್ಥಾನದಿಂದ ನನ್ನ ಹೊರ ಹಾಕಿದ್ರೂ.
ಅಲ್ಲಿಂದ ನನ್ನ ಜೀವನ ಹಾಳಾಗುತ್ತಾ ಹೋಯಿತು. ಇದೆಲ್ಲಾ ನಾನೇ ಬಾಯಲ್ಲಿ ಹೇಳಬೇಕಿತ್ತು ಆದ್ರೇ ಸತ್ತಿದ್ದೇನೆ. ನೀವೇ ಓದಿಕೊಳ್ಳಿ ಎಂದು ಡೆತ್ ನೋಟ್ ಬರೆದು ಸಾವು. ಸ್ಥಳಕ್ಕೆ ಖಡೇಬಜಾರ್ ಪೊಲೀಸರ ಭೇಟಿ ಪರಿಶೀಲನೆ. ಖಡೇಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.
ಮೊಬೈಲ್ ನಲ್ಲಿ ವಿಚಿತ್ರವಾಗಿ ಡೆತ್ ನೋಟ್ ಬರೆದು ಅರ್ಚಕರ ಮಗ ಸಾವು
