ಉ.ಕ ಸುದ್ದಿಜಾಲ ರಾಯಬಾಗ :

ಪೋಕ್ಸೋ ಕೇಸ್ ಪ್ರಕರಣದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿದ ರಾಯಬಾಗ ತಾಲೂಕು ಕೋರ್ಟ್. ಆರೋಪಿ ಭರತೇಶ ರಾವಸಾಬ್ ಮಿರ್ಜಿ‌ ಎಂಬಾತನಿಗೆ ಗಲ್ಲು ಶಿಕ್ಷೆ ಮತ್ತು 10 ಲಕ್ಷ ರೂ ದಂಡದ ವಿಧಿಸಿದೆ.

17-10-2019 ರಂದು ಪರಮಾನಂದವಾಡಿ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿದ್ದ. ಬಳಿಕ ಅಪ್ರಾಪ್ತೆಯನ್ನು ಕೊಂದು ಬಾವಿಯೊಂದರಲ್ಲಿ ಎಸೆದಿದ್ದ ಆರೋಪಿ. ಕುಡಚಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 120/19 ಪ್ರಕರಣ ದಾಖಲಾಗಿತ್ತು.

ಮಹತ್ವದ ತೀರ್ಪು ನೀಡಿ ಆದೇಶಿಸಿದ ನ್ಯಾಯಾಧೀಶೆ ಸಿ.ಎಂ ಪುಷ್ಪಲತಾ. ಪ್ರಕರಣ ಭೇದಿಸಲು ಸಹಕರಿಸಿದ ಅಧಿಕಾರಿಗಳಿವೆ ಪ್ರಶಂಸೆ.