ಉ.ಕ ಸುದ್ದಿಜಾಲ ಕಾಗವಾಡ :

ಡಿಸಿಸಿ ಬ್ಯಾಂಕ್ ಚುನಾವಣೆ ಹಿನ್ನೆಲೆ. ಕಾಗವಾಡದಿಂದ ಶಾಸಕ ರಾಜು ಕಾಗೆ ನಾಮಪತ್ರ ಸಲ್ಲಿಕೆ. ನಾಮಪತ್ರ ಸಲ್ಲಿಕೆಯ ಬಳಿಕ ಮಾಧ್ಯಮಗಳಿಗೆ ರಾಜು ಕಾಗೆ ಹೇಳಿಕೆ. ಕಾಗವಾಡದಿಂದ ನಾನು ಅಥಣಿಯಿಂಂದ ಸವದಿ ನಾಮಪತ್ರ ಸಲ್ಲಿಸಿದ್ದೆವೆ.

ಮೊದಲ ಬಾರಿಗೆ ನಾನು ಸಹಕಾರ ಕ್ಷೇತ್ರಕ್ಕೆ ಎಂಟ್ರಿಯಾಗಿದ್ದೆನೆ. ನಾನು ಪಂಚಾಯ್ತಿ ಸದಸ್ಯನಿಂದ ಹಿಡಿದು ಜಿಪಂ ಸದಸ್ಯನಾಗಿ ಐದು ಬಾರಿ ಶಾಸಕನಾಗಿದ್ದೆನೆ. ಹೊಸ ತಾಲೂಕಿನಲ್ಲೂ ಸಹ ಹೊಸ ಸದಸ್ಯರು ಆಯ್ಕೆ ಆಗಬೇಕು ಎಂದು ನೊಟಿಪಿಕೇಷನ್ ಸರ್ಕಾರ ಮಾಡಿದೆ.

ಆ ಹಿನ್ನೆಲೆಯಲ್ಲಿ ನಾನು ಹಾಗೂ ಸವದಿ ಇಬ್ಬರೂ ಸಹ ಬಂದು ನಾಮಪತ್ರ ಸಲ್ಲಿಕೆ ಮಾಡಿದ್ದೆವೆ. ಇಲ್ಲಿ ನಾವು ಯಾವ ಗುಂಪಿನಲ್ಲೂ ಇಲ್ಲ. ನಾವು ಪರವೂ ಇಲ್ಲ ವಿರೋಧವೂ ಇಲ್ಲ. ಇದು ರಾಜಕಾರಣ ಇವತ್ತಿನ ದಿನ ನಾಳೆ ಇರುವುದಿಲ್ಲ. ನಾಮಿನೇಷನ್ ಮಾಡಿದ್ದೆವೆ ಕಾದು ನೋಡೊಣ ಎಂದ ರಾಜು ಕಾಗೆ.