ಉ.ಕ ಸುದ್ದಿಜಾಲ ಬೆಳಗಾವಿ :
ಪ್ರತಿಷ್ಠಿತ ಕುಟುಂಬಗಳ ಜಿದ್ದಾಜಿದ್ದಿಯಿಂದ ರಾಜ್ಯದ ಗಮನ ಸೆಳೆದಿರುವ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ. ನಾಮಪತ್ರ ವಾಪಸ್ ಪಡೆಯಲು ಇಂದೇ ಕೊನೆಯ ದಿನ ಹಿನ್ನೆಲೆಯಲ್ಲಿ ಜೋರಾದ ಕಸರತ್ತು. ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳ ಮನವೊಲಿಕೆ ಜೋರು.
ಜಾರಕಿಹೊಳಿ ಬಣದ ಅಭ್ಯರ್ಥಿಗಳ ಅವಿರೋಧ ಆಯ್ಕೆಗೆ ಬಾಲಚಂದ್ರ ಜಾರಕಿಹೊಳಿ ಶತಪ್ರಯತ್ನ. ಮತ್ತೊಂದೆಡೆ ಸವದಿ ಹಾಗೂ ಕತ್ತಿ ಬಣದಿಂದಲೂ ಜಾರಕಿಹೊಳಿ ಬ್ರದರ್ಸ್ಗೆ ಕೌಂಟರ್. ನಾಮಪತ್ರ ಹಿಂಪಡೆಯಬೇಡಿ, ನಾವು ನಿಮ್ಮ ಜೊತೆಗಿದ್ದೇವೆ ಎಂದು ಸವದಿ- ಕತ್ತಿ ಅಭಯ.
ನಿಪ್ಪಾಣಿಯಲ್ಲಿ ಅಣ್ಣಾಸಾಹೇಬ್ ಜೊಲ್ಲೆ ವಿರುದ್ಧ ಕಣಕ್ಕಿಳಿದಿರುವ ಉತ್ತಮ ಪಾಟೀಲ. ಸಚಿವ ಸತೀಶ್ ಜಾರಕಿಹೊಳಿ ಮೂಲಕ ಉತ್ತಮ ಪಾಟೀಲ ಮೇಲೆ ಒತ್ತಡ. ರಮೇಶ್ ಕತ್ತಿ ಭೇಟಿ ಆಗಿಯೇ ನಾಮಪತ್ರ ಸಲ್ಲಿಸಿರುವ ಉತ್ತಮ ಪಾಟೀಲ. ಜಾರಕಿಹೊಳಿ ಬ್ರದರ್ಸ್ ಮನವೊಲಿಕೆಗೆ ಜಗ್ಗದ ಉತ್ತಮ ಪಾಟೀಲ.
ಕಿತ್ತೂರಲ್ಲಿ ಜಾರಕಿಹೊಳಿ ಬಣದಿಂದ ವಿಕ್ರಮ ಇನಾಮದಾರ್ ವಿರುದ್ಧ ಕಣಕ್ಕೆ.bವಿಕ್ರಮ ವಿರುದ್ಧ ಸ್ಪರ್ಧಿಸಿರುವ ಶಾಸಕ ಬಾಬಾಸಾಹೇಬ್ ಸಹೋದರ ನಾನಾಸಾಹೇಬ್. ನಾಮಪತ್ರ ಹಿಂಪಡೆಯುವಂತೆ ನಾನಾಸಾಹೇಬ್ ಮೇಲೂ ಬಾಲಚಂದ್ರ, ರಮೇಶ್ ಒತ್ತಡ.
ಬಿಜೆಪಿಯಲ್ಲಿರುವ ಜಾರಕಿಹೊಳಿ ಬ್ರದರ್ಸ್ಗೆ ಜಗ್ಗದ ನಾನಾಸಾಹೇಬ್ ಪಾಟೀಲ. ಬೈಲಹೊಂಗಲದಲ್ಲೂ ಜಾರಕಿಹೊಳಿ ಬಣದಿಂದ ಮಹಾಂತೇಶ ದೊಡ್ಡಗೌಡರ ಕಣಕ್ಕೆ. ಮಹಾಂತೇಶ ವಿರುದ್ಧ ಕಣಕ್ಕಿಳಿದಿರುವ ಮಾಜಿ ಶಾಸಕ ವಿಶ್ವನಾಥ ಪಾಟೀಲ.
ವಿಶ್ವನಾಥ ಪಾಟೀಲ ಮನವೊಲಿಕೆಗೆ ಎರಡು ದಿನಗಳಿಂದ ಸರ್ಕಸ್. ರಾಮದುರ್ಗದಲ್ಲಿ ಜಾರಕಿಹೊಳಿ ಪೆನಲ್ನಿಂದ ಎಸ್.ಎಸ್. ಡವನ್ ಸ್ಪರ್ಧೆ. ಡವನ್ ವಿರುದ್ಧ ಶಾಸಕ ಅಶೋಕ ಪಟ್ಟಣ್, ಮಲ್ಲಣ್ಣ ಯಾದವಾಡ ಸ್ಪರ್ಧೆ. ಮಲ್ಲಣ್ಣ ಹಾಗೂ ಅಶೋಕ ಪಟ್ಟಣ್ ಮಧ್ಯೆ ಹೊಂದಾಣಿಕೆ ಸಾಧ್ಯತೆ.
ಜಾರಕಿಹೊಳಿ ಪೆನಲ್ನ ದವನ್ ಸೋಲಿಸಲು ಪಟ್ಟಣ್, ಯಾದವಾಡ ಪ್ಲ್ಯಾನ್. ರಮೇಶ್ ಕತ್ತಿ ವಿರುದ್ಧ ರಾಜೇಂದ್ರ ಪಾಟೀಲ, ಲಕ್ಷ್ಮಣ ಸವದಿ ವಿರುದ್ಧ ಮಹೇಶ ಕುಮಟಳ್ಳಿ.
ರಾಜು ಕಾಗೆ ವಿರುದ್ಧ ಮಾಜಿ ಸಚಿವ ಶ್ರೀಮಂತ ಪಾಟೀಲ ಪುತ್ರ ಶ್ರೀನಿವಾಸ ಕಣಕ್ಕೆ.
ಇತರೆ ಕ್ಷೇತ್ರದಿಂದ ಚನ್ನರಾಜ್ ಹಟ್ಟಿಹೊಳಿ ವಿರುದ್ಧ ಮೂವರು ನಾಮಪತ್ರ ಸಲ್ಲಿಕೆ. ಮೂವರನ್ನು ಮನವೊಲಿಸ್ತಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಚನ್ನರಾಜ್ ಹಟ್ಟಿಹೊಳಿ.
ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಗೆ ಕೊನೆಯ ಹಂತದ ಕಸರತ್ತು – ಕಣದಲ್ಲಿ ಉಳಿಯುವವರು ಯಾರು?
