ಉ.ಕ ಸುದ್ದಿಜಾಲ ಬೆಳಗಾವಿ :

ಬೆಳಗಾವಿ ಡಿಸಿಸಿ ಬ್ಯಾಂಕ್ ಚುಕ್ಕಾಣಿ ವಿಚಾರವಾಗಿ ಮುಂದುವರೆದ ಎಟು-ಎದುರೇಟು ನಿರ್ದೇಶಕರ ಚುನಾವಣೆ ಆಯಿತು ಈಗ ಎಲ್ಲರ ಚಿತ್ತ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ಮೇಲೆ ನಾವೇ ಅಧಿಕಾರ ಹಿಡಿಯುತ್ತೇವೆ ಎಂಬ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ವಿಶ್ವಾಸ ನುಡಿ

ಲಕ್ಷ್ಮಣ ಸವದಿ ಹೇಳಿಕೆಗೆ ಪ್ರತ್ಯುತ್ತರ ಕೊಟ್ಟ ಶಾಸಕ ಬಾಲಚಂದ್ರ ಜಾರಕಿಹೊಳಿ ಡಿಸಿಸಿ ಬ್ಯಾಂಕ್ ಚುಕ್ಕಾಣಿ ಯಾರು ಹಿಡಿಯುತ್ತಾರೆ ಎಂಬುದಕ್ಕೆ 50 ಕೋಟಿ ಬೆಟ್ ಕಟ್ಟಲು ರೆಡಿ ಎಂದ ಬಾಲಚಂದ್ರ ಜಾರಕಿಹೊಳಿ‌ ಸವದಿ ಚುಕ್ಕಾಣಿ ಹಿಡಿದ್ರೆ ನಾನೇ ನನ್ನ ಆಸ್ತಿ ಮಾರಿಯಾದರೂ 50 ಕೋಟಿ ಕೊಡ್ತಿನಿ

ಸವದಿ ಕೈಗೆ ಸಾಧ್ಯವಾಗದಿದ್ರೆ 50 ಕೋಟಿ ನಮಗೆ ಕೊಡಲು ತಯಾರಿದ್ದಾರಾ ಎಂದು ಪ್ರಶ್ನೆ ನಾನು ಡಿಸಿಸಿ ಬ್ಯಾಂಕ್ ಚುಕ್ಕಾಣಿ ವಿಚಾರವಾಗಿ ಬೆಟ್ ಕಟ್ಟಲು ರೆಡಿ ಇದ್ದೇನೆ ಎಂದು ಬಹಿರಂಗ ಸವಾಲು. ಮಾಧ್ಯಮ ಸ್ನೇಹಿತರೇ ಬೇಕಾದರೆ ಈ ಬಗ್ಗೆ ಮಧ್ಯಸ್ಥಿಕೆ ವಹಿಸಿ ಎಂದ ಬಾಲಚಂದ್ರ ಜಾರಕಿಹೊಳಿ

ಫಲಿತಾಂಶಕ್ಕೂ ಮುನ್ನವೇ ನನ್ನ ಬಳಿ ಯಾರಿದ್ದಾರೆಂದು ಚೀಟಿಯಲ್ಲಿ ಬರೆದಿಟ್ಟಿರುವೆ ಎಂದಿದ್ದ ಸವದಿ ಈ ವಿಚಾರವಾಗಿ ಸವದಿಗೆ 50 ಕೋಟಿ ಬೆಟ್‌ನ ನೇರ ಸವಾಲು ಹಾಕಿದ ಬಾಲಚಂದ್ರ ಜಾರಕಿಹೊಳಿ‌