ಉ.ಕ ಸುದ್ದಿಜಾಲ ಅಥಣಿ :

ಕಳೆದ ಒಂದು ವಾರಗಳಿಂದ ಅಥಣಿಯಲ್ಲಿ ಕೈ ಕೈ ಮದ್ಯ ಗುದ್ದಾಟ ನಡೆದಿದೆ. ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ, ಕೈ ಮುಖಂಡ ಗಜಾನನ ಮಂಗಸೂಳಿ ಇಬ್ಬರ ಮದ್ಯದ ವಾದ ತಾರಕಕ್ಕೆರಿದ್ದು ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಮತ್ತೆ ಸವದಿ ವಿರುದ್ಧ ಅಪಸ್ವರದ ಮಾತು ಆಡಿದ್ದಾರೆ.

ಅಥಣಿ ಸ್ವ ಗೃಹದಲ್ಲಿ ಮಾತನಾಡಿದ ಅವರು ಶಾಸಕ ಲಕ್ಷ್ಮಣ ಸವದಿ ನನ್ನ ವಿರುದ್ಧ ಹಣದ ಬೇಡಿಕೆ ಆರೋಪ ಮಾಡಿದ್ದನ್ನು ನಾನು ಖಂಡಿಸುತ್ತೇನೆ. ನಾನು ಬಿಜೆಪಿ ಗೆ ಹೋಗುವ ಮಾತಿಲ್ಲ. ನಾನು ಕಾಂಗ್ರೆಸ್ ಪಕ್ಷದ ಏಳಿಗೆಗಾಗಿ ದುಡಿದಿದ್ದೇನೆ. ಬೇರೆ ಪಕ್ಷದಿಂದ ಬಂದವರು ಅವರು ನಾನಲ್ಲ. ಬೇಕಿದ್ರೆ ಸವದಿ ಬಿಜೆಪಿ ಗೆ ಸೇರಲಿ ಎಂದು ಹೇಳಿದರು.

ಸವದಿ ಹೇಳಿಕೆಯಂತೆ ನನಗೆ ನಾಳೆಯೇ ಸರ್ಕಾರ ನಿಘಮ ಮಂಡಳಿ ಸ್ಥಾನ ನೀಡಲಿ ಇಲ್ಲವೆ 2028 ರ ವಿಧಾನ ಸಭೆ ಚುನಾವಣೆಯಲ್ಲಿ ನಾನು ಕಾಂಗ್ರೆಸ್ ನಿಂದ ಟಿಕೆಟ್ ನೀಡಲಿ ಎಂದು ಬೇಡಿಕೆ ಇಟ್ಟಿದ್ದಾರೆ.