ಉ.ಕ ಸುದ್ದಿಜಾಲ ಹುಬ್ಬಳ್ಳಿ :

ಪೋಷಕರಿಂದ ಹತ್ಯೆಗೆ ಯತ್ನ ಆರೋಪ, ಹೆತ್ತ ತಂದೆಯಿಂದಲೇ ಗರ್ಭಿಣಿ ಮಗಳ ಹತ್ಯೆಗೆ ಯತ್ನ, ಹುಬ್ಬಳ್ಳಿ ತಾಲ್ಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಘಟನೆ.

ದಲಿತ ಯುವಕನನ್ನು ಪ್ರೀತಿಸಿ ಮದ್ವೆ ಮಾಡಿಕೊಂಡಿದ್ದಕ್ಕೆ ಕೊಲೆ ಯತ್ನ, ಮೇಲ್ಜಾತಿ ಕುಟುಂಬದ ಯುವತಿ ತಂದೆಯಿಂದ ಹತ್ಯೆಗೆ ಯತ್ನ. ಏಳು ತಿಂಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದ ಜೋಡಿ ಇನಾಂ ವೀರಾಪುರ ಗ್ರಾಮದ ಮಾನ್ಯ ಮತ್ತು ವಿವೇಕಾನಂದ ಮದುವೆಯಾಗಿದ್ದರು.

ಈ ಹಿಂದೆ ಪೊಲೀಸರು ಎರಡು ಕುಟುಂಬದವರನ್ನು ರಾಜಿ ಪಂಚಾಯತಿ ಮಾಡಿದ್ದರು ಮದುವೆಯಾಗಿ ಏಳು ತಿಂಗಳ ಮೇಲೂ ಕೌರ್ಯ ಮೆರೆದ ಯುವತಿ ಪೋಷಕರು. ಮದ್ವೆ ನಂತರ ಪ್ರಾಣಭಯದಿಂದ ಹಾವೇರಿ ಜಿಲ್ಲೆಯಲ್ಲಿ ವಾಸವಾಗಿದ್ದ ಜೋಡಿ
ಡಿಸೇಂಬರ್ 8 ರಂದು ಊರಿಗೆ ಆಗಮಿಸಿದ್ದ ಮಾನ್ಯ ಮತ್ತು ವಿವೇಕಾನಂದ.

ನಿನ್ನೆ ಸಂಜೆ ಮನೆಯಲ್ಲಿ ಇದ್ದಾಗ ಮಾನ್ಯ ಹಾಗೂ ವಿವೇಕಾನಂದ ಮೇಲೆ ಅಟ್ಯಾಕ್ ವಿವೇಕಾನಂದ, ಮಾನ್ಯ,ತಾಯಿ ರೇಣುವ್ವ ತಂದೆ ಸುಭಾಷ್ ಮೇಲೆ ಅಟ್ಯಾಕ್ ಪ್ರಕಾಶ್ ಗೌಡ ಪಾಟೀಲ್, ವೀರನಗೌಡ ಪಾಟೀಲ್, ಅರುಣ್ ಗೌಡ ಪಾಟೀಲ್ ರಿಂದ ಕೊಲೆ ಯತ್ನ ಆರೋಪ.

ಹುಬ್ಬಳ್ಳಿ ಗ್ರಾಮೀಣ ಪೊಲೀಸರಿಂದ ಗಾಯಾಳುಗಳ ರಕ್ಷಣೆ ಆರೋಪಿಗಳ ಪತ್ತೆಗೆ ವಿಶೇಷ ತಂಡ ಮಾನ್ಯ ಹುಬ್ಬಳ್ಳಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲು ವಿವೇಕಾನಂದ ಪೋಷಕರು ಕಿಮ್ಸ್ ಆಸ್ಪತ್ರೆಗೆ ದಾಖಲು.