ಉ.ಕ ಸುದ್ದಿಜಾಲ ಬೆಳಗಾವಿ :
ಬಿಯರ್ ಕುಡಿಸಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರಗೈದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ. ಬೆಳಗಾವಿ ಪೋಕ್ಸೋ ವಿಶೇಷ ನ್ಯಾಯಾಲಯದ ಮಹತ್ವದ ಆದೇಶ. 8 ತಿಂಗಳ ಅವಧಿಯಲ್ಲಿ ಪ್ರಕರಣ ಇತ್ಯರ್ಥಗೊಳಿಸಿ ನಾಲ್ವರಿಗೆ ಕಠಿಣ ಶಿಕ್ಷೆ ಪ್ರಕಟ.
ಸಾಕೀಬ್ ನಿಜಾಮಿ (22), ರವಿ ನಾಯ್ಯೋಡಿಗೆ ಜೀವಾವಧಿ ಶಿಕ್ಷೆ, 8.76 ಲಕ್ಷ ದಂಡ. ಕೃತ್ಯಕ್ಕೆ ಸಹಕರಿಸಿದ ರೋಹನ್ ಪಾಟೀಲ, ಅಶುತೋಷ ಪಾಟೀಲಗೆ 20 ವರ್ಷ ಜೈಲು ಶಿಕ್ಷೆ ಹಾಗೂ ಈ ಇಬ್ಬರಿಗೂ 6 ಲಕ್ಷ ದಂಡ ವಿಧಿಸಿ ನ್ಯಾಯಾಧೀಶರಾದ ಸಿ.ಎಂ ಪುಷ್ಪಲತಾ ಆದೇಶ.
ಸಂತ್ರಸ್ತೆಗೆ 10 ಲಕ್ಷ ಪರಿಹಾರ ನೀಡುವಂತೆ ಕಾನೂನು ಪ್ರಾಧಿಕಾರಕ್ಕೂ ಆದೇಶ. 2025 ಮೇ 10ರಂದು ಬೆಳಗಾವಿಯ ಸಾವಗಾಂವ್ ಫಾರ್ಮ್‌ಹೌಸ್‌ನಲ್ಲಿ ಗ್ಯಾಂಗ್ ರೇಪ್. ಅಪ್ರಾಪ್ತೆ ಎಂದು ಗೊತ್ತಿದ್ದರೂ ಬಿಯರ್ ಕುಡಿಸಿ ಸಾಮೂಹಿಕ ಅತ್ಯಾಚಾರ. ಸಾಲದೆಂಬಂತೆ ಅಪ್ರಾಪ್ತೆಯ ಚಿನ್ನದ ಸರ ಎಗರಿಸಿದ್ದ ಕಾಮುಕರು.
ಈ ಸಂಬಂಧ ಬೆಳಗಾವಿಯ ಟಿಳಕವಾಡಿ ಠಾಣೆಯಲ್ಲಿ ದೂರು ನೀಡಿದ್ದ ಪೋಷಕರು. ಬಳಿಕ ಈ ಪ್ರಕರಣ ಟಿಳಕವಾಡಿಯಿಂದ ಮಾರ್ಕೆಟ್ ಪೊಲೀಸ್ ಠಾಣೆಗೆ ವರ್ಗಾವಣೆ. ಸರ್ಕಾರದ ಪರ ವಿಶೇಷ ಅಭಿಯೋಜಕ ಎಲ್.ವಿ ಪಾಟೀಲ ವಕಾಲತ್ತು.
VIDIO – ಬಿಯರ್ ಕುಡಿಸಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರಗೈದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ


