ಉ.ಕ ಸುದ್ದಿಜಾಲ ರಾಯಬಾಗ :

ದಕ್ಷಿಣ ಭಾರತದ ಅತ್ಯಂತ ಶಕ್ತಿದೇವತೆಯಾದ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದ ಶ್ರೀ ಮಾಯಕ್ಕಾ ದೇವಿಯ ಜಾತ್ರೆ ಭಾರತ ಹುಣ್ಣಿಮೆಯ ಹಸ್ತ ನಕ್ಷತ್ರದಂದು ಜಾತ್ರೆಯಲ್ಲಿ ಕೋಟ್ಯಾಂತರ ಭಕ್ತಸಾಗರವೆ ಹರಿದು ಬಂದು ತಾಯಿ ಮಾಯಕ್ಕಾ ದೇವಿಯ ದರ್ಶನ ಪಡೆದು ತಮ್ಮ ಹರಿಕೆಗಳನ್ನು ತಿರಿಸುತ್ತಾರೆ

ಈ ಭಕ್ತಿಸಾಗರದ ನಡುವೆ ಮಹಾರಾಷ್ಟ್ರ ರಾಜ್ಯದ ಪಂಡರಪುರದಿಂದ ಆಗಮಿಸಿದ ಭಕ್ತನೊಬ್ಬ ತನ್ನ ಅಪಾರ ಭಕ್ತಿಯಿಂದ ಎಲ್ಲರ ಗಮನ ಸೆಳೆದನು. ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ಪತ್ನಿಯ ಆಸೆಯನ್ನು ಪೂರೈಸಲು ವೈದ್ಯರ ಸಲಹೆ ಪಡೆದುಕೊಂಡು, ಲಕ್ಷಾಂತರ ಭಕ್ತರ ನಡುವೆ ಆಕ್ಸಿಜನ್ ಸಿಲಿಂಡರ್ನ್ನು ಹೊತ್ತುಕೊಂಡು ಪತ್ನಿಗೆ ನಿರಂತರ ಆಮ್ಲಜನಕ ಪೂರೈಸುತ್ತಾ ನೇರವಾಗಿ ತಾಯಿ ಮಾಯಕ್ಕಾ ದೇವಿಯ ದರ್ಶನ ಮಾಡಿಸಿದ್ದಾನೆ

ಪತ್ನಿಯ ಆರೋಗ್ಯದ ಬಗ್ಗೆ ಎಚ್ಚರ ವಹಿಸುತ್ತಲೇ ದೇವಿಯ ಹರಿಕೆಯನ್ನು ತೀರಿಸಿದ ಈ ಪತಿಯ ಭಕ್ತಿ ಮತ್ತು ಧೈರ್ಯ ಎಲ್ಲರ ಮನಸ್ಸನ್ನು ಮುಟ್ಟಿತು. ತಾಯಿ ಮಾಯಕ್ಕಾ ದೇವಿಯ ಮೇಲಿನ ಅಚಲ ನಂಬಿಕೆ ಹಾಗೂ ದಾಂಪತ್ಯದ ಪ್ರೀತಿಯ ಪ್ರತೀಕವಾಗಿ ಈ ಘಟನೆ ಭಕ್ತರಲ್ಲಿ ಭಾವನಾತ್ಮಕ ಸ್ಪಂದನ ಮೂಡಿಸಿತು.