ಉ.ಕ ಸುದ್ದಿಜಾಲ ಹುಕ್ಕೇರಿ :

ಕೋಕಾ ಕೇಸನಲ್ಲಿ ಸಾಕ್ಷಿಯಾಗಿದ್ದಕ್ಕೆ ಯುವಕನ ಭೀಕರ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೆರಿ ತಾಲೂಕಿನ ಹಿಡಕಲ್ ಡ್ಯಾಂ ಹತ್ತಿರ ನಡೆದಿದೆ. ಹಳೆ ವೈಷಮ್ಯದಿಂದ ಮುತ್ತುಸ್ವಾಮಿ ಭೀಕರ ಕೊಲೆ ಮಾಡಿದ ಆರೋಪಿಗಳು.

ಗೋಕಾಕ ಫಾಲ್ಸ್ ಹತ್ತಿರ ಇರುವ ಮಾಣಿಕವಾಡಿ ಗ್ರಾಮದ ಕೊಲೆಯಾದ ವ್ಯಕ್ತಿ. ಮುತ್ತುಸ್ವಾಮಿ ಹೃದಯರಾಜ ಪಾಸ್ಕಲ(30) ಕೊಲೆಯಾದ ಯುವಕ. ಒಂದು ಆಟೋ, ಎರಡು ಬೈಕ್ ಮೇಲೆ ಬಂದಿದ್ದ ಗ್ಯಾಂಗನಿಂದ ಏಕಾಏಕಿ ದಾಳಿ ಮಾಡಿ ಕೊಲೆ ಮಾಡಲಾಗಿದೆ.

ಗೋಕಾಕನಲ್ಲಿ ಸಿದ್ದಪ್ಪ ಎನ್ನುವ ವ್ಯಕ್ತಿ ಕೊಲೆಗೆ ಸಾಕ್ಷಿ ಆಗಿ ನಿಂತಿದ್ದ ಮುತ್ತುಸ್ವಾಮಿ. ಕೊಲೆ ಕೇಸಗೆ ಸಾಕ್ಷಿಯಾಗಿ ನಿಂತಿದ್ದ ಮುತ್ತುಸ್ವಾಮಿಗೆ ಟೈಗರ್ ಗ್ಯಾಂಗ್ ನಿಂದ ಜೀವಬೆದರಿಕೆ ಆರೋಪ. ಸಾಯುಕ್ಕಿಂತ ಮೊದಲೇ ತನ್ನ ಅಕ್ಕನಿಗೆ ಹೇಳಿದ್ದನಂತೆ ಮುತ್ತುಸ್ವಾಮಿ.

ನಂದೇನಾದರೂ ಕೊಲೆ ಆದರೆ ಅದಕ್ಕೆ ಟೈಗರ್ ಗ್ಯಾಂಗನವರು ಕಾರಣ ಎಂದು. ಮುತ್ತುಸ್ವಾಮಿ ಮೇಲೆ ಕೇಸ್ ಇದ್ದು ಧಾರವಾಡ ಜೈಲಿನಿಂದ ಕೊಲೆ ಆಗುವ ಮುಂಚಿನ ದಿನವೆ ಬಿಡುಗಡೆ ಆಗಿದ್ದ ಮುತ್ತುಸ್ವಾಮಿ.
.
ಹಿಡಕಲ್ ಡ್ಯಾಂ ಬಳಿ ಸ್ನೇಹಿತರ ಜೊತೆ ಹೋಗುವಾಗ ಏಕಾಏಕಿ ದಾಳಿ ಮಾಡಿದ ವಿರೋಧಿಗಳು. ತಪ್ಪಿಸಿಕ್ಕೊಂಡು ಓಡುವಾಗ ಕೆಳಗೆ ಬಿದ್ದ ಹಿನ್ನಲೆ ಮುತ್ತುಸ್ವಾಮಿ ಸುತ್ತುವರೆದು ಭೀಕರ ಕೊಲೆ. ಬದ್ದ ವೈರಿಗಳಿಂದ ಮುತ್ತುಸ್ವಾಮೀಯನ್ನ ಹಿಂಬಾಲಿಸಿ ಭೀಕರ ಕೊಲೆ.
ಮಾರಕಸ್ತ್ರಗಳಿಂದ ಕೊಚ್ಚಿ ಭೀಕರ ಕೊಲೆ ಮಾಡಿ ಆರೋಪಿಗಳು ಎಸ್ಕೇಪ್ ಆಗಿದ್ದಾರೆ.

ವಿರೋಧಿ ಗುಂಪಿನಿಂದ ಹಲ್ಲೆ ಮಾಡುತ್ತಿದ್ದಂತೆ ಮುತ್ತುಸ್ವಾಮಿ ಸ್ನೇಹಿತರು ಎಸ್ಕೇಪ್ ಆಗಿದ್ದಾರೆ. ಮುತ್ತುರಾಜನ ಕುತ್ತಿಗೆ ಭಾಗಕ್ಕೆ ಮಚ್ಚಿನಿಂದ ದಾಳಿ ಹಿನ್ನಲೆ ಗಂಭೀರ ಗಾಯ. ಗಂಭೀರ ಗಾಯಗೊಂಡಿದ್ದ ಮುತ್ತಸ್ವಾಮೀಯನ್ನ ಆಸ್ಪತ್ರೆಗೆ ತೆಗದುಕ್ಕೊಂಡು ಹೋಗುವಾಗ ಮಾರ್ಗಮಧ್ಯೆ ಸಾವು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ. ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆಇದಾಗಿದೆ.