ಉ.ಕ ಸುದ್ದಿಜಾಲ ಅಥಣಿ :

ಅಥಣಿ ವಿಧಾನಸಭಾ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷ ಇನ್ನೂವರೆಗೂ ಅಧಿಕೃತವಾಗಿ ಯಾರು ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬುದ ಖಚಿತವಾಗಿಲ್ಲ ಈ ನಡುವೆ ಅಥಣಿಯಿಂದ ಪೋಲಿಸ ಅಧಿಕಾರಿಯೊಬ್ಬರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸ್ಪರ್ಧಿಸುವುದು ಖಚಿತವಾಗಿದೆ.

ಏಪ್ರಿಲ್ 3 ರಂದು ಅಥಣಿ ಮತಕ್ಷೇತ್ರಕ್ಕೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕರಾದ ಜನಾರ್ಧನ ರೆಡ್ಡಿ ಅಥಣಿ ಮತಕ್ಷೇತ್ರಕ್ಕೆ ಆಗಮಿಸಲಿದ್ದಾರೆ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಥಣಿ ಮತಕ್ಷೇತ್ರದ ಅಭ್ಯರ್ಥಿ ಬಸವರಾಜ ಬಿಸನಕೋಪ್ಪ ತಿಳಿಸಿದ್ದಾರೆ.

ಅಥಣಿಯ ಅವರ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಏಪ್ರಿಲ್ 3 ರಂದು ನಡೆಯಲಿರುವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಆಗಮಿಸುವಂತೆ ಮಾದ್ಯಮಗಳ ಮೂಲಕ ಅಥಣಿ ಜನತೆಗೆ ಕರೆ ನೀಡಿದರು.

ಇನ್ನೂ ತಮ್ಮ ಸಿಪಿಐ ಹುದ್ದೆಗೆ ರಾಜಿನಾಮೆ ನೀಡಿ ಅಥಣಿ ಜನರ ಸೇವೆ ಮಾಡುವ ಸದಾವಕಾಶ ಒದಗಿ ಬಂದಿದ್ದು ಶಿವಯೋಗಿ ಸಿದ್ಧೆಶ್ವರರ ಆಶಿರ್ವಾದದಿಂದ ಜನ ಸೇವೆಗೆ ಅವಕಾಶ ಸಿಗುವ ಸಾಧ್ಯತೆ ಇದೆ ಎಂದರು.