ಉ.ಕ ಸುದ್ದಿಜಾಲ ಅಥಣಿ :

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮಹಿಷವಾಡಗಿ ಡಾಕ್ಟರ್ ಕಿಡ್ನಾಪ್ ಮಾಡಿ ಮಾರಣಾಂತಿಕ ಹಲ್ಲೆ. ಕಿಡ್ನಾಪ್ ಮಾಡಿ 2 ಗಂಟೆ ಚಿತ್ರಹಿಂಸೆ ಕೊಟ್ಟ ಆರೋಪಿಗಳು. ಕೇಸ್ ದಾಖಲಾದ್ರು ಈವರೆಗೂ ಆರೋಪಿಗಳನ್ನ ಬಂಧಿಸದ ಪೊಲೀಸರು.

ಬೆಳಗಾವಿ ಜಿಲ್ಲೆ ‌ಅಥಣಿ ತಾಲೂಕಿನ ಸವದಿ ಗ್ರಾಮದಲ್ಲಿ ಘಟನೆ. ಮಹೀಷವಾಡಗಿ ಗ್ರಾಮದ ನಿವಾಸಿ ಡಾ.ಆನಂದ ಉಪಾಧ್ಯಾಯ. ಜುಲೈ 10 ರಂದು ಶಾಲೆ ಕ್ಯಾಂಪ್ ನಿಂದ ಕಿಡ್ನಾಪ್ ಮಾಡಿ ಹಲ್ಲೆ ಆರೋಪ. ಗಂಭೀರವಾಗಿ ಗಾಯಗೊಂಡ ಡಾ. ಆನಂದ ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲು.

ಶ್ರೀ ಪದ್ಮಾವತಿ ಇಂಟರ್ನ್ಯಾಷನಲ್ ಸ್ಕೂಲ್ ಮಾಲೀಕ ಆನಂದ. ತೇಲಿ ಕುಟುಂಬದ ಜೊತೆಗೆ ಸೇರಿ 2018 ರಲ್ಲಿ ಸ್ಕೂಲ್ ಆರಂಭ. ಆನಂತರ ಹಣಕಾಸಿನ ವಿಚಾರದಲ್ಲಿ ಗಲಾಟೆ. ತೇಲಿ ಕುಟುಂಬಕ್ಕೆ 1 ಕೋಟಿ 80 ಲಕ್ಷ ಹಣ ನೀಡಿ ಶಿಕ್ಷಣ ಸಂಸ್ಥೆಯಿಂದ ಹೊರ ಹಾಕಿದ್ದ ಡಾ.ಆನಂದ. ಆ ಬಳಿಕ ಸ್ಕೂಲ್ ವಿಚಾರವಾಗಿ ಹೈಕೋರ್ಟ್ ನಲ್ಲಿ ಕೇಸ್ ನಡೆಯುತ್ತಿದೆ.

ಹಲ್ಲೆ ಮಾಡಿದ ಆರೋಪಿ ವಿರುದ್ಧ ಅಥಣಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು. ಕಿಡ್ನಾಪ್ ಆದ ತಕ್ಷಣವೇ ಅಥಣಿ ಪೊಲೀಸರ ಗಮನಕ್ಕೆ ತಂದಿದ್ದ ಡಾಕ್ಟರ್ ಕುಟುಂಬ.