ಉ.ಕ ಸುದ್ದಿಜಾಲ ಅಥಣಿ :
ಡಿಸಿಸಿ ಬ್ಯಾಂಕ್ ನೌಕರರ ಯೂನಿಯನ್ ಅಧ್ಯಕ್ಷ ಕರೆಣ್ಣವರ್ ಮೇಲೆ ಹಲ್ಲೆ ಪ್ರಕರಣ ಕಾಂಗ್ರೆಸ್ ಶಾಸಕ, ಪುತ್ರನ ಮೇಲೆ ಕೇಸ್ ದಾಖಲು, ಶಾಸಕ ಲಕ್ಷ್ಮಣ ಸವದಿ, ಪುತ್ರ ಚಿದಾನಂದ ಸವದಿ ಸೇರಿ 8 ಜನ ಅಪರಿಚಿತರ ಮೇಲೆ ಕೇಸ್ ದಾಖಲು
ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ಅಥಣಿ ಪೊಲೀಸರಿಗೆ ದೂರು ಕೊಟ್ಟ ಕರೆಣ್ಣವರ್ ದೂರಿನಲ್ಲಿ ಮನೆಗೆ ಕರೆಸಿ ಅವಾಚ್ಯಶಬ್ಧಗಳಿಂದ ನಿಂದಿಸಿ ಹಲ್ಲೆ ಶಾಸಕ ಲಕ್ಷ್ಮಣ ಸವದಿ ಕಪಾಳಕ್ಕೆ ಹೊಡೆದಿದ್ದಾರೆ ಪುತ್ರ ಚಿದಾನಂದ ಸವದಿ ಬಲವಾಗಿ ಸೊಂಟಕ್ಕೆ ಒದ್ದಿದ್ದಾನೆ. ಆಗ ನೆಲಕ್ಕೆ ಬಿದ್ದ ನನ್ನ ಮೇಲೆ 7 ರಿಂದ 8 ಜನರು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖ
ಅಕ್ರಮ ಕೂಟ ಸೇರಿ ಹಲ್ಲೆ, ಮಾರಣಾಂತಿಕ ಹಲ್ಲೆ, ಜೀವ ಬೆದರಿಕೆ, ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದಾರೆಂದು ಕೇಸ್ ದಾಖಲು ಬಿಎನ್ ಎಸ್ ಕಾಯ್ದೆ ಪ್ರಕಾರ 189(2), 191(2), 115(2), 351(2), 352(2)1 90 ಕಲಂ ಅಡಿ ಕೇಸ್ ದಾಖಲು. ಬೆಳಗಾವಿ ಜಿಲ್ಲೆಯ ಅಥಣಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಅಥಣಿ ಪೋಲಿಸ್ ಠಾಣೆಯಲ್ಲಿ ದಾಖಲಾದ ಎಫ್‌ಐಆರ್ ಪ್ರತಿ ಈ ಕೆಳಗಿದೆ


