ಉ.ಕ ಸುದ್ದಿಜಾಲ ಅಥಣಿ :
ಅಂಗಡಿ ಮುಂದೆ ಅನಧಿಕೃತ ಬ್ಯಾರಿಕೆಟ್ ತೆರವು ಮಾಡು ಎಂದಿದ್ದಕ್ಕೆ ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ಘಟನೆ ಅಥಣಿ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಹಲ್ಯಾಳ ರಸ್ತೆಯಲ್ಲಿಯುವ ಚಿಂಚಲಿ ಲುಬ್ರಿಕಂಟ್ಸ್ ಅಂಗಡಿ ಮಾಲಿಕ ಇಂತಿಯಾ ಚಿಂಚಲಿ ಎಂಬಾತ ಪ್ರಧಾನಿ ನರೇಂದ್ರ ಮೋದಿಯವರಿಗೆ ಅವಾಚ್ಯ ಪದಗಳಿಂದ ನಿಂದಿಸಿದ ವ್ಯಕ್ತಿ.
ಆತನ ಅಂಗಡಿ ಮುಂದೆ ಅನಧಿಕೃತವಾಗಿ ಬ್ಯಾರಿಕೆಡ್ ಅವಳವಡಿಸಿದ್ದ. ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದ್ದು ತೆರವು ಮಾಡುವಂತೆ ಸಾರ್ವಜನಿಕರೊಬ್ಬರು ಪ್ರಶ್ನೆ ಮಾಡಿದ್ದಾರೆ.
ಇಷ್ಟಕ್ಕೆ ಆಕ್ರೋಶಗೊಂಡ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿಯವರನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ. ಅಂಗಡಿ ಮಾಲಿಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
VIDIO -ಪ್ರಧಾನಿ ಮೋದಿಗೆ ಅವಾಚ್ಯ ಪದಗಳಿಂದ ನಿಂದಿಸಿದ ಅಥಣಿ ಮುಸ್ಲಿಂ ವ್ಯಾಪಾರಿ : ಸಾರ್ವಜನಿಕರ ಆಕ್ರೋಶ..!


