ಉ.ಕ‌ ಸುದ್ದಿಜಾಲ ಅಥಣಿ :

ಲಕ್ಷ್ಮಣ್ ಸವದಿ ವಿರುದ್ದ ನಾಲಿಗೆ ಹರಿಬಿಟ್ಟ ಗೋಕಾಕ ಶಾಸಕ ರಮೇಶ ಜಾರಕಿಹೋಳಿ ಲಕ್ಷ್ಮಣಗೆ ನನ್ನ ಕಂಡರೆ ಭಯವಿದೆ ಲಕ್ಷ್ಮಣ್ ಸವದಿಗೆ ನನ್ನ ಗೂಟ ಗುತ್ತಿದೆ ಶಾಸಕ ಸವದಿ ವಿರುದ್ಧ ರಮೇಶ್ ಜಾರಕಿಹೊಳಿ ಲೇವಡಿ.

ನನಗೆ ಹೊರಗಿನವ ಅಂತಾ ಈ ಭಾಗದಲ್ಲಿ ಸವದಿ ಬಿಂಬಿಸಿದ್ದಾರೆ. ರಮೇಶ್ ಕತ್ತಿ ಬಂದು ಸವದಿ ಮನೆಯಲ್ಲಿ ಕುಳಿತರೆ ನಡೆಯುತ್ತದೆ.ಈ ಭಾಗದ ಅಮ್ಮಜೆಶ್ವರಿ ಏತ ನೀರಾವರಿ ಯೋಜನೆ ಹಾಳು ಹಿಡಿದೆ. ಎಲ್ಲ್ಲಾ ಪ್ರೊಜೆಕ್ಟ್ ಸತ್ಯಾನಾಸ ಆಗಿದೆ ನಾವು ತಿರುಗಿ ಬಂದ ನಂತರ ಎಲ್ಲವನ್ನೂ ಮತ್ತೆ ನೊಡಿಕೊಳ್ಳುತ್ತೆವೆ ಅಥಣಿಯಲ್ಲಿ ರಮೇಶ್ ಜಾರಕಿಹೊಳಿ ಹೇಳಿಕೆ

ನಾವು ಯಾವುದೋ ಒಂದು ಕಾರಣಕ್ಕಾಗಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದಾಗ ಲಕ್ಷ್ಮಣ್ ಸವದಿಗೆ ಹೆಚ್ಚಿನ ಲಾಭವಾಯಿತು. ಸವದಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರಿಂದ ಬಿಜೆಪಿಯಿಂದ ಪೀಡಾ ಹೋಯಿತು. ಅದು ಕಾಂಗ್ರೆಸ್ ಪಾಲಾಗಿದೆ, ಬಿಜೆಪಿಯಲ್ಲಿ ಸವದಿ ಇದ್ದರೆ ರಾಜ್ಯದಲ್ಲಿ ಅತಿ ದೊಡ್ಡ ಲೀಡರ್ ಆಗುತ್ತಿದ್ದ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಅಥಣಿ ಪಟ್ಟಣದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿ ಐದು ವರ್ಷ ಶಾಸಕರಾಗಿ ಕೆಲಸ ಮಾಡಬಹುದು. ಆದರೆ, ಬಿಜೆಪಿ ಬಿಟ್ಟು ಸವದಿ ತನ್ನ ವ್ಯಕ್ತಿತ್ವವನ್ನು ಹಾಳು ಮಾಡಿಕೊಂಡ, ಬಿಜೆಪಿ ಬಿಟ್ಟಿದ್ದು ಒಳ್ಳೆಯದಾಯ್ತು. ಇನ್ನು ಮುಂದೆ ಸವದಿ ಬಿಜೆಪಿ ಬರೋದಕ್ಕೆ ನಾವು ಆಸ್ಪದ ಕೊಡುವುದಿಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಬ್ಬರಿಸಿದ್ದಾರೆ.

ಕೃಷ್ಣಾ ಸಕ್ಕರೆ ಕಾರ್ಖಾನೆ ಸಂಘದ ಚುನಾವಣೆ ಹಿನ್ನೆಲೆ ಸ್ವಾಭಿಮಾನಿ ರೈತರ ಪೆನಲ್​​ಗೆ ಬೆಂಬಲ ಕೊಟ್ಟು ಅಥಣಿ ಪಟ್ಟಣದ ವೇದಿಕೆಯಲ್ಲಿ ಮಾತನಾಡಿದ ಶಾಸಕ ರಮೇಶ್ ಜಾರಕಿಹೊಳಿ, ಶಾಸಕ ಲಕ್ಷ್ಮಣ್ ಸವದಿ ಬಿಜೆಪಿ ಮರಳಿ ಬರುವುದು ಅಷ್ಟೇನೂ ಸಲೀಸಿಲ್ಲ, ಮೊದಲಿಗಿಂತಲೂ ಈಗ ನಾವು ಬಿಜೆಪಿಯಲ್ಲಿ ಒಳ್ಳೆಯ ಸ್ಥಾನಮಾನ ಪಡೆದಿದ್ದೇವೆ.

ಸವದಿ ಬಿಜೆಪಿಗೆ ಬರುವುದಾದರೆ ಅವನನ್ನು ಎಲ್ಲಿ ತಡೆಯಬೇಕು ಅಲ್ಲಿ ನಾವು ತಡೆಯುತ್ತೇವೆ, ಆ ಶಕ್ತಿಯು ಕೂಡ ನಮ್ಮಲ್ಲಿದೆ, ಇದನ್ನು ಮೀರಿ ಅವನು ಏನಾದರೂ ಪಕ್ಷಕ್ಕೆ ಬಂದರೆ ಮುಂದೆ ದೇವರಿದ್ದಾನೆ ನೋಡೋಣ ಎಂದರು.

ಅವಕಾಶ ಸಿಕ್ಕರೆ ಪಂಚಾಯಿತಿ ಅಧ್ಯಕ್ಷಗಿರಿಯಿಂದಲೂ ಹಿಂದೆ ಸರಿಯಲ್ಲ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆಗುವುದಕ್ಕೆ ಆಸೆ ವ್ಯಕ್ತಪಡಿಸಿಲ್ಲ ಎಂದು ಶಾಸಕ ಸವದಿ ಹೇಳುತ್ತಾರೆ, ಆದರೆ ಸವದಿಗೆ ಅವಕಾಶ ಸಿಕ್ಕರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಆಗೋಕೂ ಹಿಂದೆ ಸರಿಯುವುದಿಲ್ಲ. ಬಿಡಿಸಿಸಿ ಅಧ್ಯಕ್ಷ ಸ್ಥಾನ ಸಿಗುತ್ತದೆ ಎಂದರೆ ಜಾರಕಿಹೊಳಿ ಮನೆಗೆ ಬಂದು ಕಾಲಿಗೆ ಬಿದ್ದು ( ನಮಸ್ಕಾರ) ಇಲ್ಲೇ ಕೋರುತ್ತಾನೆ ಎಂದು ಲೇವಡಿ ಮಾಡಿದರು.

ಮೊನ್ನೆ ಡಿಕೆ ಶಿವಕುಮಾರ್ ಮನೆಯಲ್ಲಿ ನಾನೇ ಬೆಳಗಾವಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗುತ್ತೇನೆ ಎಂದು ಹೇಳಿದ್ದಾನೆ. ಅಥಣಿಯಲ್ಲಿ ಕುಳಿತು ನಾನು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ ಎಂದು ಹೇಳುತ್ತಾನೆ. ಅವಕಾಶ ಸಿಕ್ಕರೆ ಜಿಗಿದು ಬರುತ್ತಾರೆ.

ಲಕ್ಷ್ಮಣ್ ಸವದಿ ಮಾತು ಕೇಳಿ ರಾಜ್ಯದಲ್ಲಿ ಇಬ್ಬರು ಪ್ರಮುಖ ನಾಯಕರು ಹಾಳಾಗಿದ್ದಾರೆ, ಅಣ್ಣಾಸಾಬ್ ಜೊಲ್ಲೆ ಸಂಸದ ಸ್ಥಾನವನ್ನು ಕಳೆದುಕೊಂಡರು, ರಮೇಶ್ ಕತ್ತಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನ ಕಳೆದುಕೊಂಡರು. ಸದ್ಯ ಸವದಿ ಮಾತು ಕೇಳಿಕೊಂಡು ಇವರಿಬ್ಬರು ಹುಚ್ಚರಾಗಿದ್ದಾರೆ ಎಂದರು.

ನನ್ನ ಮಾತು ನಡೆಯದಿದ್ದರೆ ರಾಜೀನಾಮೆ ಕೊಡುತ್ತೇವೆ. ಅಥಣಿ ತಾಲೂಕು ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಮಹೇಶ್ ಕುಮಠಳ್ಳಿಗೆ ಸೋಲಾಗಿರಬಹುದು. ಸೋತರೂ ಈ ಭಾಗದ ಡೈರೆಕ್ಟರ್ ಅವರೇ ಅವನನ್ನು ಕೇಳಿ ನಾವು ಮುಂಬರುವ ಪತ್ತುಗಳನ್ನು ನೀಡುತ್ತೇವೆ.

ಸವದಿ ಆಯ್ಕೆಯಾದರೂ ತಾಂತ್ರಿಕವಾಗಿ ಅಷ್ಟೇ ಆಡಳಿತ ನಡೆಸಬಹುದು, ಎಲ್ಲವೂ ಮಹೇಶ್ ಕುಮಠಳ್ಳಿ ಅವರಿಂದ ನಿರ್ಧಾರ ಮಾಡಿಸುತ್ತೇವೆ. ನನ್ನ ಮಾತಿನ ಮೇಲೆ ನಿಮಗೆ ವಿಶ್ವಾಸವಿದೆ, ನನ್ನ ಮಾತು ಕೂಡ ಡಿಸಿಸಿ ಬ್ಯಾಂಕಿನಲ್ಲಿ ನಡೆಯುತ್ತದೆ, ನಮ್ಮ ಮಾತು ಏನಾದರೂ ನಡೆಯದಿದ್ದರೆ, ನನ್ ಮಗನು ಕೂಡ ಡಿಸಿಸಿ ಬ್ಯಾಂಕಿಗೆ ರಾಜೀನಾಮೆ ಕೊಡಿಸುತ್ತೇನೆ. ನಮ್ಮ ಆಡಳಿತ ಅಲ್ಲಿ ನಡೆಯುತ್ತದೆ, ನಡೆಯದಿದ್ದರೆ ನಾವು ರಾಜೀನಾಮೆ ಕೊಡುತ್ತೇವೆ ಎಂದರು.

ಕಾಗವಾಡ ತಾಲೂಕಿನ ಡಿಸಿಸಿ ಬ್ಯಾಂಕ್​ನಿಂದ ಶ್ರೀನಿವಾಸ್ ಪಾಟೀಲ್ ಅವರನ್ನು ಶಾಸಕ ರಾಜು ಕಾಗೆ ವಿರುದ್ಧ ನಾಮಪತ್ರ ಸಲ್ಲಿಕೆ ಮಾಡಿಸಲಾಗಿತ್ತು. ಆದರೆ ನನ್ನ ಸಹೋದರ ಬಾಲಚಂದ್ರ ಜಾರಕಿಹೊಳಿ ಮನವಿ ಮೇರೆಗೆ ಕಾಗೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿ ಎಂದಾಗ ನಾವು ಶ್ರೀನಿವಾಸ್ ಪಾಟೀಲ್ ನಾಮಪತ್ರ ಹಿಂದಕ್ಕೆ ತೆಗೆದುಕೊಂಡೆವು. ಬಾಲಚಂದ್ರ ಭರವಸೆ ಮೇರೆಗೆ ನಮ್ಮ ಅಭ್ಯರ್ಥಿಯಿಂದ ನಾಮಪತ್ರ ಹಿಂದಕ್ಕೆ ತೆಗೆದುಕೊಂಡಿದ್ದೇವೆ ಎಂದು ರಮೇಶ್​ ಜಾರಕಿಹೊಳಿ ಇದೇ ವೇಳೆ ಸ್ಪಷ್ಟನೆ ನೀಡಿದರು.

ಕೃಷ್ಣ ಸುಗರ್ ಕಾರ್ಖಾನೆಯ ಸ್ವಾಭಿಮಾನಿ ರೈತರ ಪೆನಲ್ ಆಯ್ಕೆಯಾದರೆ, ನಾನು ನೇರವಾಗಿ ಅಮಿತ್ ಶಾ ಅವರ ಕಡೆ ಹೋಗಿ ಇದರ ಮೇಲೆ ಜೀರೋ ಪರ್ಸೆಂಟ್ ಸಾಲವನ್ನು ತಂದು ಈ ಕಾರ್ಖಾನೆ ನಡೆಸುತ್ತೇವೆ. ಶಾಸಕ ಲಕ್ಷ್ಮಣ್ ಸವದಿ ನೂರಾರು ಕೋಟಿ ರೂಪಾಯಿ ಸಾಲ ತೆಗೆದಿದ್ದಾರೆ, ಶಾಸಕ ಸವದಿ ಆ ಕಾರ್ಖಾನೆ ಹೆಸರು ಹೇಳಿ ವಿಜಯಪುರ ರೋಡಿಗೆ ದೊಡ್ಡ ದೊಡ್ಡ ಕಾರ್ಖಾನೆ ಮಾಡಿದ್ದಾರೆಂದು ಆರೋಪಿಸಿದರು.