ಉ.ಕ ಸುದ್ದಿಜಾಲ ಅಥಣಿ :
ಡ್ರೈವಿಂಗ್ ವಿಚಾರಕ್ಕೆ ಯುವಕನನ್ನ ಕೇಬಲ್ ನಿಂದ ಊರುಳಾಡಿಸಿ, ಹಿಗ್ಗಾ ಮುಗ್ಗಾ,ತಳಿಸಿದ ಘಟನೆ ಯೊಂದು ತಡವಾಗಿ ಬೆಳಕಿಗೆ ಬಂದಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮಾಯಣ್ಣಟ್ಟಿ ಗ್ರಾಮದ ಶಿವಪ್ಪ ವಾಗರೆ ಎಂಬಾತ ನಾಗನೂರು ಪಿ ಎ ಮೂಲದ ಮುರಸಿದ್ಧ ಶ್ರೀಶೈಲ್ ಚೌಗಲಾ ಎಂಬ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ, ಅದನ್ನ ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡಿ ವಿಕೃತಿ ಮೆರೆದಿದ್ದಾರೆ.
ಸಂಬಂದಿಕ ಸೋಮಲಿಂಗ ವಾಗರೇ ಮಾಲೀಕತ್ವದ ಗೂಡ್ಸ ವಾಹನ ಮೇಲೆ ಕಳೆದ ಮೂರು ವರ್ಷಗಳಿಂದ ಡ್ರೈವರ ಆಗಿ ಕೆಲಸ ಮಾಡುತ್ತಿದ್ದ ಮುರಸಿದ್ಧ ಚೌಗಲಾ ಕುಡಿದು ವಾಹನ ಚಾಲನೆ ಮಾಡುತ್ತಿದೀಯಾ ಅಂತಾ ಬೆನ್ನಟ್ಟಿ ಬಂದು ಹಾರೋಗೇರಿ ಸಮೀಪದ ನಿರ್ಜನ ಪ್ರದೇಶದಲ್ಲಿ ಕರೆದುಕೊಂಡು ಹೋಗಿ ಸೋಮವಾರ ರಾತ್ರಿ ಮಾರನಾಂತಿಕವಾಗಿ ಹಲ್ಲೆ ಮಾಡಿದ್ದಾರೆ.
ಯುವಕನ ಬೆನ್ನು, ಕಾಲಿಗೆ ಗಂಭೀರ ಗಾಯಗಳಾಗಿದ್ದು. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಹಾರೋಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಕೇಬಲ್ ನಿಂದ ಮರಣಾಂತಿಕ ಹಲ್ಲೆ : ವಿಡಿಯೋ ಮಾಡಿ ವಿಕೃತಿ ಮೆರೆದ ದುರುಳರು

