ಉ.ಕ ಸುದ್ದಿಜಾಲ ಕಾಗವಾಡ :
ಬೆಳಗಾವಿ ಜಿಲ್ಲೆಯ ಕಾಗವಾಡ ಶಾಸಕ ರಾಜು ಕಾಗೆ ಹಿರಿಯ ಪುತ್ರಿ ಕೃತಿಕಾ ಕಳೆದ ಎರಡು ವರ್ಷದಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು ಚಿಕಿತ್ಸೆ ಫಲಿಸದೆ ನಿನ್ನೆ ಮದ್ಯಾನ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಇಂದು ಬೆಳಿಗ್ಗೆ 6 ಗಂಟೆಗೆ ಕಾಗವಾಡ ತಾಲೂಕಿನ ಉಗಾರ್ ಪಟ್ಟಣದ ಶಾಸಕ ರಾಜು ಕಾಗೆ ಸ್ವ ಗೃಹದಲ್ಲಿ ಅಂತಿಮ ನಮನಕ್ಕೆ ಏರ್ಪಾಡು ಮಾಡಲಾಗಿದೆ. ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಸೇರಿದಂತೆ ಸ್ವಾಮೀಜಿಗಳು ಅಪಾರ ಅಭಿಮಾನಿಗಳು ಬಂದು ಅಂತಿಮ ನಮನ ಸಲ್ಲಿಸಿ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ.
ಬೆಳಿಗ್ಗೆ 11.30 ಕ್ಕೆ ಉಗಾರ್ ಪಟ್ಟಣದ ಪಂಚಮಸಾಲಿ ವಿಧಿ ವಿಧಾನಗಳಂತೆ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಿತು. ಅಪಾರ ಬಂಧು ಬಳಗ ಅಗಲಿದ ಮೃತ ಕೃತಿಕಾ ಅಂತಿಮ ದರ್ಶನಕ್ಕೆ ಸಾಗರೋಪಾದಿಯಲ್ಲಿ ಜನ ಹರಿದು ಬರುತ್ತಿದೆ.
ಶಾಸಕ ರಾಜು ಕಾಗೆ ಹಿರಿಯ ಸುಪುತ್ರಿ ಕೃತಿಕಾ ಅವರಿಗೆ ಕ್ಯಾನ್ಸರ ಖಾಯಿಲೆ ಹಿನ್ನಲೆ ಮೃತ ಪಟ್ಟಿದ್ದಾರೆ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಪ್ರತಿಕ್ರಿಯೆ ನೀಡಿದ್ದಾರೆ.
ಶಾಸಕ ರಾಜು ಕಾಗೆ ಪುತ್ರಿ ಕೃತಿಕಾ ಅಂತ್ಯಕ್ರಿಯೆ – ಸಾವಿಗೆ ಕಾರಣವೇನು ಲಕ್ಷ್ಮಣ ಸವದಿ ಹೇಳಿದ್ದೇನು
